ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ಪತ್ರಕರ್ತರು, ಪ್ರಖ್ಯಾತ ಲೇಖಕ ಸುಗತ ಶ್ರೀನಿವಾಸರಾಜು ಅವರು ರಚಿಸಿರುವ Furrows in a Field; The Unexplored Life of H.D. Deve Gowda ಮಹಾನ್ ಕೃತಿಯನ್ನು ಶ್ರೀಮತಿ ರೋಸಿ ಡಿ ಸೋಜಾ ಅವರು ‘ಹೆಚ್.ಡಿ. ದೇವೇಗೌಡರ ಬದುಕು ಮತ್ತು ದುಡಿಮೆಯ ನೇಗಿಲ ಗೆರೆಗಳು‘ ಶೀರ್ಷಿಕೆಯಲ್ಲಿ
ಕನ್ನಡಕ್ಕೆ ಅನುವಾದಿಸಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ‘ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿ ಸಾಹಿತ್ಯ ಪ್ರಶಸ್ತಿ‘ಗೆ ಪಾತ್ರವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದು ಅತ್ಯಂತ ಸಂತೋಷದ ಸಂಗತಿ ಆಗಿದ್ದು, ಈ ಸಂದರ್ಭದಲ್ಲಿ ಸುಗತ ಅವರು ಹಾಗೂ ಶ್ರೀಮತಿ ರೋಸಿ ಡಿ ಸೋಜಾ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಹಾಗೆಯೇ ಅನುವಾದ ಕೃತಿಯನ್ನು ಪ್ರಕಾಶಿಸಿದ ಪಾರದರ್ಶಕ ಮೀಡಿಯಾ ಫೌಂಡೇಷನ್‘ಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.


