ಕರಾಟೆ ಅಕಾಡೆಮಿ ವಿದ್ಯಾರ್ಥಿಗಳಿಂದ ಗಿನ್ನೀಸ್ ದಾಖಲೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಕ್ಟೋಬರ್
5 ರಂದು ಚೆನ್ನೈನ SIVET ಕಾಲೇಜ್ ವೇಲಚೆರ್ರಿಯಲ್ಲಿ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ರವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ( Guiness book of world records) ಕಾರ್ಯಕ್ರಮವನ್ನು ಆಯೋಜಿಸಿದ್ದರು.

ರಾಷ್ಟ್ರದ ಎಲ್ಲಾ ರಾಜ್ಯಗಳಿಂದ  ಸುಮಾರು 2000 ಕ್ರಿಡಾಪಟುಗಳು ಭಾಗವಹಿಸಿದ್ದರು. ಕಳೆದ ವರ್ಷ 1500 ಕರಾಟೆ ಪಟುಗಳು 10ನಿಮಿಷ ಏಕಕಾಲದಲ್ಲಿ  ಕರಾಟೆಯ ಎಲ್ಲಾ ವಿನ್ಯಾಸಗಳನ್ನು ಒಟ್ಟಿಗೆ ಪ್ರದರ್ಶಿಸಿ ಗಿನ್ನೆಸ್ ದಾಖಲೆ ಬರೆದಿದ್ದರು.

- Advertisement - 

ಈ ವರ್ಷ 2000 ಕರಾಟೆ ಪಟುಗಳು ಬಾಗವಹಿಸಿ 20 ನಿಮಿಷದಲ್ಲಿ ಏಕಾಕಾಲದಲ್ಲಿ ಎಲ್ಲಾ ಕರಾಟೆ ವಿನ್ಯಾಸಗಳನ್ನು ಪ್ರದರ್ಶಿಸಿ ಹೊಸ ಗಿನ್ನೆಸ್ ದಾಖಲೆಯನ್ನು ಮಾಡಿರುತ್ತಾರೆ.

ಕರ್ನಾಟಕದ ಯಲಹಂಕ ನ್ಯೂಟೌನ್ ನ  ಕೇಂದ್ರವಾದ ಸಾನ್ವಿ ಕರಾಟೆ ಅಕಾಡೆಮಿಯಿಂದ ಮುಖ್ಯ ತರಬೇತುದಾರರಾದ ಡಾ.ಕೃಷ್ಣ ಚೈತನ್ಯ ರವರಲ್ಲಿ ತರಬೇತಿ ಪಡೆದ ಪುನರ್ವಿ ಎಸ್ ಗೌಡ, ವೇದಾಂತ್ ಬಿ. ಎಂ. ನಿಖಿಲ್ ನೇಹೇಮಿಯ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನದ ಪದಕ ಗೆದ್ದು ಗಿನ್ನೀಸ್ ಪ್ರಮಾಣ ಪತ್ರ ಪಡೆದಿದ್ದಾರೆ. ಕಿರಿ ವಯಸಿನಲ್ಲಿ ಅಮೋಘ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹೆಡ್ ಕೋಚ್ ಡಾ.ಕೃಷ್ಣ ಚೈತನ್ಯ ಮತ್ತು ಪೋಷಕರು ಅಭಿನಂದಿಸಿದರು.

- Advertisement - 

 

 

 

Share This Article
error: Content is protected !!
";