ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇದು ಸತ್ತ ಸರಕಾರವೋ ಅಥವಾ ಬದುಕಿರುವಂತೆ ನಟಿಸುತ್ತಿರುವ ನಿರ್ಜೀವ ಸರಕಾರವೋ? ಅಥವಾ ಸತ್ತವರನ್ನೂ ಬೆಂಬಿಡದೆ ಬೆನ್ನತ್ತಿರುವ ಬೇತಾಳ ಸರಕಾರವೋ? ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಅದಕ್ಕೆ ಸಾಕ್ಷ್ಯ ಇಲ್ಲಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಯು ಜಾತಿ ಸಮೀಕ್ಷೆಗೆ ಸತ್ತು ಹೋಗಿರುವ ಸಿಬ್ಬಂದಿಯನ್ನು ನಿಯೋಜಿಸಿದೆ.
ಈ ಕರ್ನಾಟಕ ಕಾಂಗ್ರೆಸ್ ಸರಕಾರಕ್ಕೆ ಕನಿಷ್ಠ ಮಟ್ಟದ ಕಾಮನ್ ಸೆನ್ಸ್ ಅನ್ನೋದು ಇದೆಯ? ಸತ್ತವರು ಸ್ವರ್ಗದಿಂದ ಅಥವಾ ನರಕದಿಂದ ಬಂದು ಸಮೀಕ್ಷೆ ಮಾಡಲು ಸಾಧ್ಯವೇ?
ಸರಕಾರಿ ಸೇವೆಯಿಂದ ನಿವೃತ್ತಿ ಆಗಿರುವ ಸಿಬ್ಬಂದಿ ಬಂದು ಸಮೀಕ್ಷೆ ಕೆಲಸ ಮಾಡಲು ಆಗುತ್ತದೆಯೇ? ಇದು ಮತಿಗೇಡಿ, ಬುದ್ಧಿಗೇಡಿ ಸರಕಾರ. ಇವರು ಅದೆಷ್ಟು ಪಾರದರ್ಶಕವಾಗಿ ಸಮೀಕ್ಷೆ ಮಾಡುತ್ತಿದ್ದಾರೆ ಅನ್ನುವುದಕ್ಕೆ ಇದು ಒಂದು ಸ್ಯಾಂಪಲ್ ಅಷ್ಟೇ ಎಂದು ಜೆಡಿಎಸ್ ತಿಳಿಸಿದೆ.

