ದೇವೇಗೌಡರ ಆರೋಗ್ಯ ವಿಚಾರಿಸಿದ ಬಿಜೆಪಿ ನಾಯಕ ಬಿ.ವೈ ಯಡಿಯೂರಪ್ಪ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಸ್ಪತ್ರೆಗೆ ದಾಖಲಾಗಿರುವ ದೇಶಕಂಡ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕ ಬಿ.ವೈ ಯಡಿಯೂರಪ್ಪ ಅವರು ಗೌಡರ ಆರೋಗ್ಯ ವಿಚಾರಿಸಿದರು.

ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿರುವ ದೇವೇಗೌಡರು ಎಂದಿನಂತೆ ಲವಲವಿಕೆಯಿಂದ ನಮ್ಮೊಂದಿಗೆ ಬೆರೆತು ಉಭಯ ಕುಶಲೋಪರಿಗಳನ್ನು ವಿಚಾರಿಸಿದರು.

- Advertisement - 

ದೇವೇಗೌಡರು ಕರುನಾಡಿನ ಹೆಮ್ಮೆ, ಭಾರತದ ಹಿರಿಮೆ, ಅವರು ಸದಾ ಚೈತನ್ಯಶೀಲರಾಗಿ ದೇಶದ ಬೆಳವಣಿಗೆಗಳಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

ಇಂದಿನ ಪೀಳಿಗೆಗೆ ಅವರ ಬದುಕು, ಹೋರಾಟ, ಜೀವನಶೈಲಿ ಸದಾ ಮಾರ್ಗದರ್ಶಿಯಾಗಿದೆ. ಶತಾಯುಷ್ಯವನ್ನು ಪೂರೈಸಿ ಅವರು ಸುದೀರ್ಘ ಕಾಲ ನಮ್ಮೊಂದಿಗೆ ಇರಬೇಕೆಂಬುದು ಕೋಟಿ ಕೋಟಿ ಕನ್ನಡಿಗರ ಹಾರೈಕೆಯಾಗಿದೆ.

- Advertisement - 

 

Share This Article
error: Content is protected !!
";