ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸುತ್ತಲಿನ ಪೋಳಿಯಯ ಮೇಲೆ ಹೊರ ಮತ್ತು ಒಳಭಾಗದಲ್ಲಿ ಮಂದಹಾಸ ಪ್ರಭಾವಳಿ ಮತ್ತು ಪ್ಯಾರಾಪಿಟ್ ನಿರ್ಮಾಣ ಕಾಮಗಾರಿಯನ್ನು ಲಕ್ಷ್ಮೀದೇವಮ್ಮ ಮತ್ತು ಕೋನಪ್ಪ ರೆಡ್ಡಿ ರವರ ಕುಟುಂಬದವರು ಸುಮಾರು 25 ಲಕ್ಷಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಿಕೊಡಲು ಶ್ರೀ ಕ್ಷೇತ್ರದಲ್ಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದಾನಿಗಳ ಕುಟುಂಬದವರು ದೇವಾಲಯದ ಕಾರ್ಯದರ್ಶಿ ಮತ್ತು ಆಯುಕ್ತ ಪಿ.ದಿನೇಶ್, ಪ್ರಾಧಿಕಾರದ ಸದಸ್ಯರಾದ ಶ್ರೀರಂಗಪ್ಪ, ಹೇಮಲತಾ, ರಮೇಶ್, ಲಕ್ಷ್ಮ ನಾಯಕ್, ಮಹೇಶ್ ಕುಮಾರ್, ರವಿ, ಪ್ರಧಾನ ಅರ್ಚಕ ಶ್ರೀನಿಧಿ ಹಾಗೂ ಅರ್ಚಕ ವರ್ಗದವರು ದೇವಾಲಯದ ನಂಜಪ್ಪ ದೇವಾಲಯದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

