ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಟಿ ಕೋಟಿ ಪ್ರಿಯಾಂಕ್ ಖರ್ಗೆ ಅವರೇ “ನಾಟಿ ಕೋಳಿ ಡಿನ್ನರ್” ಮುಗಿಸಿದ್ದರೆ ಕಲಬುರಗಿ ಜಿಲ್ಲೆಯ ಜನರ ಸಂಕಷ್ಟಗಳನ್ನು ಕಿವಿಗೊಟ್ಟು ಕೇಳಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ಪ್ರಿಯಾಂಕ್ ಖರ್ಗೆ ಅವರೇ, ಸಿಎಂ ಜೊತೆ ನೀವು ನಾಟಿ ಕೋಳಿ ತಿಂದು ಖುಷಿಯಾಗಿದ್ದಾಗಲೇ, ನಿಮ್ಮ ತವರು ಜಿಲ್ಲೆ ಕಲಬುರಗಿಯ ಮಳಖೇಡದಲ್ಲಿ ಗ್ರಂಥಪಾಲಕಿ ತುತ್ತು ಅನ್ನಕ್ಕೂ ದುಡ್ಡಿಲ್ಲದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ 3 ತಿಂಗಳಿನಿಂದ ಸಂಬಳ ನೀಡದೆ, ಕಿರುಕುಳ ನೀಡಿದ ಕಾರಣಕ್ಕೆ ಭಾಗ್ಯವತಿ ಅಗ್ಗಿಮಠ ಡೆತ್‌ನೋಟ್ ಬರೆದಿಟ್ಟು, ಗ್ರಂಥಾಲಯದಲ್ಲಿಯೇ ನೇಣು ಬಿಗಿದುಕೊಂಡಿದ್ದಾರೆ. ಇದಕ್ಕೆ ನೀವು ಮತ್ತು ಕಾಂಗ್ರೆಸ್‌ಸರ್ಕಾರವೇ ನೇರೆ ಹೊಣೆ ಎಂದು ಜೆಡಿಎಸ್ ಆರೋಪಿಸಿದೆ.

