ಕಳಪೆ ಪಡಿತರ ಕೊಟ್ಟರೆ ಯಾರು ತಿನ್ನುತ್ತಾರೆ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಚಿತ ಅನ್ನಭಾಗ್ಯ, ಅನಾರೋಗ್ಯ ಖಚಿತ ! ಎಂದು ಜೆಡಿಎಸ್ ವ್ಯಂಗ್ಯವಾಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ ಅವರೇ, ಗ್ಯಾರಂಟಿ ಕೊಡ್ತಿದ್ದೇವೆ ಎಂದು ಇಂತಹ ಕಳಪೆ ಪಡಿತರ ಕೊಟ್ಟರೆ ಯಾರು ತಿನ್ನುತ್ತಾರೆ?

ಕಲ್ಲು, ಮಣ್ಣು ಮಿಶ್ರಿತ ಅಕ್ಕಿ, ರಾಗಿಯನ್ನು ನಿಮ್ಮ ಮನೆಯಲ್ಲಿ ಬಳಸಿ ಕುಟುಂಬ ಸಮೇತ ಊಟ ಮಾಡಿ. ಆಗ ಅನ್ನಭಾಗ್ಯ ಫಲಾನುಭವಿಗಳು ಅನುಭವಿಸುತ್ತಿರುವ ಕಷ್ಟ ನಿಮ್ಮ ಅರಿವಿಗೂ ಬರಬಹುದು ಎಂದು ಜೆಡಿಎಸ್ ಆಗ್ರಹ ಮಾಡಿದೆ.

- Advertisement - 

ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪನವರೇ, ಜಾನುವಾರುಗಳು ಸಹ ತಿನ್ನಲು ಯೋಗ್ಯವಲ್ಲದ ಇಂತಹ ಕಳಪೆ ರಾಗಿಯನ್ನು ಬಡವರಿಗೆ ನೀಡಲು ಮನಸ್ಸಾದರೂ ಹೇಗೆ ಬರುತ್ತದೆ ? ಬಡವರು ಎಂದರೇ ಯಾಕಿಷ್ಟು ತಾತ್ಸರ ?

ಫ್ರೀ ಪ್ರೀ ಫ್ರೀ ಎಂದು  ಗ್ಯಾರಂಟಿ ಆಸೆ ತೋರಿಸಿ ಇಂತಹ ಕಲಬೆರಕೆ ಪಡಿತರಗಳನ್ನು ನೀಡಿ, ಬಡ ಜನರ ಜೀವದ ಜೊತೆ ಚಲ್ಲಾಟವಾಡಬೇಡಿ. ನೊಂದವರ ಕಣ್ಣೀರಿನ ಶಾಪ ಸರ್ಕಾರಕ್ಕೆ ತಟ್ಟದೆ ಬಿಡುವುದಿಲ್ಲ ಎಂದು ಜೆಡಿಎಸ್ ಎಚ್ಚರಿಸಿದೆ.

- Advertisement - 

 

Share This Article
error: Content is protected !!
";