ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
100ನೇ ವರ್ಷಾಚರಣೆ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆ ದಿನದಂದು ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಲಾಯಿತು.
1925 ರ ಸೆಪ್ಟೆಂಬರ್ 27 ರಂದು ಸ್ಥಾಪನೆ ಯಾಗಿದ್ದು ಹಿಂದೂ ಶಿಸ್ತು ಸಂಯಮ ವನ್ನು ತುಂಬುವುದು ಮತ್ತು. ಹಿಂದೂ ಸಮುದಾಯವನ್ನು ಬಲಪಡಿಸಲು ಹಾಗು ಭಾರತೀಯ ಸಂಸ್ಕೃತಿ ಅದರ ನಾಗರಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಆದರ್ಶವನ್ನು ಉತ್ತೇಜಿಸಲು ಈ ಸಂಘಟನೆಯು ಗುರಿಯನ್ನು ಹೊಂದಿದೆ.
ವಸಾಹತುಶಾಹಿ ಅವಧಿಯಲ್ಲಿ, ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವನ್ನು ವಹಿಸಲಿಲ್ಲ. ಸ್ವಾತಂತ್ರ್ಯದ ನಂತರ, ಅದು ಪ್ರಭಾವಶಾಲಿ ಹಿಂದೂ ಸಂಸ್ಕೃತಿ ಬೆಳೆಸಲು, ಹಲವಾರು ಸಂಯೋಜಿತ ಪಕ್ಷಗಳನ್ನು ಹುಟ್ಟುಹಾಕಿತು. ಇದರ ಅಂಗವಾಗಿ 100ವರ್ಷಾಚರಣೆಯ
ಉದ್ದೇಶದಿಂದ ಸೋಮವಾರ ಸಂಜೆ 5 ಗಂಟೆಗೆ ನಗರದ ಬಯಲು ಬಸವಣ್ಣ ದೇವಾಲಯದ ಬಳಿ ಆರ್ ಎಸ್ ಎಸ್ ಗೀತೆ ಹಾಡಿದ ನಂತರ ಆರಂಭವಾದ ವಿಜಯದಶಮಿ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಸವಣ್ಣ ದೇವಾಲಯದ ಬಳಿ ಅಂತ್ಯಗೊಂಡಿತು.
ರಸ್ತೆಯ ಉದ್ದಕ್ಕೂ ಪಥಸಂಚಲನದ ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪ ವೃಷ್ಟಿ ಸುರಿಸಿದರು. ವಿವಿಧ ಕಡೆಗಳಲ್ಲಿ ಮಹಿಳೆಯರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಗಣಧಾರಿಗಳಿಗೆ ಸ್ವಾಗತ ಕೋರಿದರು.
ಶಾಸಕ ಧೀರಜ್ ಮುನಿರಾಜು ಗಣ ವೇಷಧಾರಿಯಾಗಿ ಎಡ, ಬಲ, ಎಡ, ಎನ್ನುತ್ತಾ ಪಥಸಂಚಲನದಲ್ಲಿ ಭಾಗಿಯಾಗಿ ಗಮನ ಸೆಳೆದರು. ಪಥಸಂಚಲನದಲ್ಲಿ ಸುಮಾರು 600 ಕ್ಕೂ ಹೆಚ್ಚು ಗಣ ವೇಷಧಾರಿಗಳು ಭಾಗವಹಿಸಿದ್ದರು.

