ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಸುಲಭ!, ಲಕ್ಷಾಂತರ ಜನರಿಗೆ ಅನುಕೂಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಸುಲಭ!
ಗ್ರೇಟರ್‌ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾವನ್ನು ಆನ್‌ಲೈನ್‌ನಲ್ಲೇ ಪಡೆಯುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬುಧವಾರ ಚಾಲನೆ ನೀಡಿದರು.

2000 ಚ.ಮೀ.ಗಳವರೆಗಿನ ನಿವೇಶನಗಳಿಗೆ bbmp.karnataka.gov.in/BtoAKhata ವೆಬ್‌ಸೈಟ್‌ನಲ್ಲಿ ಹಾಗೂ 2000 ಚ.ಮೀ.ಗೂ ಹೆಚ್ಚಿನ ನಿವೇಶನಗಳಿಗೆ bpas.bbmp.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ತಾಪತ್ರಯ ಕಡಿಮೆ ಆಗಲಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

- Advertisement - 

ಬಿ-ಖಾತಾದಿಂದ ಎ-ಖಾತಾ ಆನ್​​ಲೈನ್​ನಲ್ಲಿ ಪರಿವರ್ತಿಸುವುದು ಹೇಗೆ?​
2000
ಚ.ಮೀ.ಗಳವರೆಗಿನ ನಿವೇಶನಗಳಿಗೆ ನಿಮ್ಮ ಮೊಬೈಲ್​​ ಮತ್ತು ಓಟಿಪಿ ಬಳಸಿಕೊಂಡು https://bbmp.karnataka.gov.in/BtoAKhata ಸೈಟ್​​ಗೆ ಲಾಗಿನ್​ ಆಗಿ. ನಿಮ್ಮ ಅಂತಿಮ ಬಿ-ಖಾತೆಯ ಇಪಿಐಡಿ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಿರಿ.

ಮಾಲೀಕರ ಆಧಾರ್ ದೃಢೀಕರಿಸಿ. ನಿವೇಶನವಿರುವ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢೀಕರಿಸಿ. ಭೂ ಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ನಿವೇಶನಗಳು ಅರ್ಹ (ಫ್ಲಾಟ್​​ಗ ಳಿಗೆ ಅರ್ಹತೆಯಿಲ್ಲ).

- Advertisement - 

ಸ್ವೀಕೃತಿಯನ್ನು ಪಡೆಯಿರಿ. ನಗರ ಪಾಲಿಕೆ ವತಿಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ ಮಾರುಕಟ್ಟೆ ಮೌಲ್ಯದ ಶೇ. 5% ರಷ್ಟು ಮೊತ್ತವನ್ನು ಏಕ ನಿವೇಶನ ಅನುಮೋದನೆ ಶುಲ್ಕವಾಗಿ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವುದು.

ಸ್ವಯಂಕೃತ ಏಕ ನಿವೇಶನ ಅನುಮೋದನೆಯಾಗಿ ಅರ್ಹತಾನುಸಾರ ಎ-ಖಾತಾ ವಿತರಣೆ2000 ಚ.ಮೀ.ಗೂ ಹೆಚ್ಚಿನ ನಿವೇಶನಗಳಿಗೆ ನೋಂದಾಯಿತ ವಾಸ್ತುಶಿಲ್ಪಿ ಅಥವಾ ಎಂಜಿನಿಯರ್​ರನ್ನು ಸಂಪರ್ಕಿಸಿ ಯಾವುದೇ ರೀತಿಯ ನಿವೇಶನಗಳಿಗಾಗಿ https://bpas.bbmp.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು ಮತ್ತು ಕ್ಯಾಡ್ ಡ್ರಾಯಿಂಗ್ ಅನ್ನು ಅಪ್ ಲೋಡ್ ಮಾಡಿ ಆರಂಭಿಕ ಪರಿಶೀಲನಾ ಶುಲ್ಕ ರೂ.500 ಅನ್ನು ಪಾವತಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ (ಫ್ಲಾಟ್ ಗಳಿಗೆ ಅರ್ಹತೆಯಿಲ್ಲ) ನಿವೇಶನಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ ಅನ್ವಯವಾಗುವ ಶುಲ್ಕಗಳನ್ನು ಪಾವತಿಸುವುದು. ಅರ್ಹತಾನುಸಾರ ಏಕ ನಿವೇಶನ ಅನುಮೋದನೆ ಪ್ರಮಾಣಪತ್ರ, ಡ್ರಾಯಿಂಗ್ ಮತ್ತು ಎ-ಖಾತಾ ವಿತರಣೆ.

 

 

Share This Article
error: Content is protected !!
";