ಚಂದ್ರವಳ್ಳಿ ನ್ಯೂಸ್, ಅಹಮದಾಬಾದ್:
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊರತುಪಡಿಸಿ ಅವರ ಸಂಪುಟದ ಎಲ್ಲಾ 16 ಸಚಿವರು ಗುರುವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12.39ಕ್ಕೆ ಹೊಸ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಂಪುಟ ಶುಕ್ರವಾರ ಮಧ್ಯಾಹ್ನ 12.39ಕ್ಕೆ ವಿಸ್ತರಣೆಯಾಗಲಿದೆ ಎಂದು ಗುಜರಾತ್ ಸರ್ಕಾರದ ಪ್ರಕಟಣೆ ತಿಳಿಸಿದೆ.
ಗುಜರಾತ್ ಸಂಪುಟ ವಿಸ್ತರಣೆಯಲ್ಲಿ 10 ಹೊಸ ಸಚಿವರು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹಿರಿಯ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಗುಜರಾತ್ ಸಚಿವ ಸಂಪುಟವು ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ 17 ಸಚಿವರನ್ನು ಒಳಗೊಂಡಿದೆ. ಅವರಲ್ಲಿ 8 ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರು, ಉಳಿದವರು ರಾಜ್ಯ ಸಚಿವರು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿ ಹಕ್ಕು ಮಂಡಿಸುವ ಮತ್ತು ಹೊಸ ಸಂಪುಟ ರಚಿಸುವ ನಿರೀಕ್ಷೆಯಿದೆ. ಗುಜರಾತ್ ವಿಧಾನಸಭೆ182 ಸದಸ್ಯರನ್ನು ಹೊಂದಿದೆ.

