ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ತಪಾಸಣೆ ಮಾಡಿದ ಸಚಿವ ಸೋಮಣ್ಣ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯ ಭಾಗವಾದ ತಿಮ್ಮರಾಜನಹಳ್ಳಿ-ಊರುಕೆರೆ (13 ಕಿ.ಮೀ) ರೈಲು ಮಾರ್ಗ  ಮತ್ತು ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಊರುಕೆರೆ-ತುಮಕೂರು ಭಾಗದಲ್ಲಿ (12 ಕಿ.ಮೀ) ಮೋಟಾರ್ ಟ್ರಾಲಿಯ ಮೂಲಕ ತಪಾಸಣೆ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಸುಮಾರು 11,800 ಕೋಟಿ ಮೌಲ್ಯದ ಒಂಬತ್ತು ಪ್ರಮುಖ ಹೊಸ ರೈಲು ಮಾರ್ಗಗಳು ಪ್ರಗತಿಯಲ್ಲಿವೆ. ರೈಲ್ವೆ ಸುರಕ್ಷತಾ ಆಯುಕ್ತರ  ಪರಿಶೀಲನೆಯ ನಂತರ ತುಮಕೂರುಊರುಕೆರೆತಿಮ್ಮರಾಜನಹಳ್ಳಿ ವಿಭಾಗದಲ್ಲಿ ರೈಲು ಸಂಚಾರಕ್ಕೆ  ಚಾಲನೆ ನೀಡಲಾಗುವುದು ಎಂದು ಹೇಳಿದರು.

- Advertisement - 

ತುಮಕೂರು – ರಾಯದುರ್ಗ ಹೊಸ ಮಾರ್ಗ ಯೋಜನೆಯ ಭಾಗವಾಗಿರುವ ದೊಡ್ಡಹಳ್ಳಿ – ಪಾವಗಡ – ಮಡಕಶಿರಾ ಭಾಗದಲ್ಲಿ ತಪಾಸಣೆಯನ್ನು ನಡೆಸುವುದಾಗಿ ಅವರು ತಿಳಿಸಿದರು.

ತಪಾಸಣೆ ಸಮಯದಲ್ಲಿ  ತುಮಕೂರು ಗ್ರಾಮೀಣ ಶಾಸಕ ಬಿ. ಸುರೇಶ್ ಗೌಡ, ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಮುಖ್ಯ ನಿರ್ಮಾಣ ಎಂಜಿನಿಯರ್ ಪ್ರದೀಪ್ ಪುರಿ, ಮುಖ್ಯ ನಿರ್ಮಾಣ ಎಂಜಿನಿಯರ್ ಪ್ರಸಾದ್ ಮತ್ತು ಬೆಂಗಳೂರು ವಿಭಾಗದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement - 

 

 

Share This Article
error: Content is protected !!
";