ಲೆಕ್ಕಪರಿಶೋಧನೆ ವರದಿ ಸಲ್ಲಿಸಲು ಸೂಚನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮಗಳ ಅನುಸಾರ ಸಹಾಕಾರ ಸಂಘ ಮತ್ತು ಸೌಹಾರ್ದ ಸಹಾಕಾರಿ ಸಂಘಗಳು ಪ್ರತಿವರ್ಷ ವಾರ್ಷಿಕ ಮಹಾಸಭೆ ನಡೆಸಿ,

ಲೆಕ್ಕಪರಿಶೋಧನ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಜಿಲ್ಲೆಯ ಬಹುಪಾಲು ಸಂಘಗಳು ಲೆಕ್ಕಪರಿಶೋಧನಾ ಫರ್ಮಿನ ನೇಮಕಾತಿ ಬಗ್ಗೆ ಮಾಹಿತಿ ನೀಡಿರುವುದಿಲ್ಲ.

- Advertisement - 

2025-26ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಆಯ್ಕೆ ಪತ್ರಗಳನ್ನು ಸಲ್ಲಿಸುವಾಗ ವಾರ್ಷಿಕ ಮಹಾಸಭೆಯ ನಡವಳಿಗಳ ಧೃಡೀಕೃತ ನಕಲು ಪ್ರತಿಯನ್ನು ಮುಖಪತ್ರದೊಂದಿಗೆ 7 ದಿನಗಳ ಒಳಗಾಗಿ

ಚಿತ್ರದುರ್ಗದ ಜೆ.ಸಿ.ಆರ್ ಬಡಾವಣೆಯಲ್ಲಿನ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ಕಚೇರಿ ಸಲ್ಲಿಸಬೇಕು. ಇಲ್ಲವಾದಲ್ಲಿ ಇಲಾಖೆಯಿಂದ ಸದರಿ ಸಂಘಗಳಿಗೆ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದು ಪ್ರಕಟಣೆ ತಿಳಿಸಿದೆ.

- Advertisement - 

 

 

 

 

 

Share This Article
error: Content is protected !!
";