ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಆತ್ಮಹತ್ಯೆ ಭಾಗ್ಯಕ್ಕೆ ಮತ್ತೊಬ್ಬ ಸರ್ಕಾರಿ ನೌಕರ ಬಲಿಯಾಗಿದ್ದಾನೆಂದು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಎರಡು ವರ್ಷಗಳಿಂದ ಸಂಬಳ ಸಿಗದೆ ಬೇಸತ್ತಿದ್ದ ವಾಟರ್ಮ್ಯಾನ್ ಚಿಕ್ಕಸು ನಾಯಕ ಅವರು ಗ್ರಾ.ಪಂ. ಕಚೇರಿ ಬಾಗಿಲು ಬಳಿ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಕಲಬುರ್ಗಿಯಲ್ಲಿ ಸಂಬಳ ಸಿಗದೆ ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಆಘಾತದಿಂದ ಹೊರಬರುವ ಮುನ್ನವೇ ಈಗ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದಿವಾಳಿತನಕ್ಕೆ ಮತ್ತೊಂದು ಬಲಿಯಾಗಿದೆ ಎಂದು ಅವರು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ನವರೇ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ ಅವರೇ, ತಿಂಗಳಿಗೆ ಕೇವಲ 5,000 ರೂಪಾಯಿ ಸಂಬಳ ಪಡೆಯುವ ಒಬ್ಬ ಬಡ ವ್ಯಕ್ತಿಗೆ 2 ವರ್ಷದಿಂದ ಸಂಬಳ ಕೊಡದೇ ಸಾಯಿಸಿಬಿಟ್ಟರಲ್ಲ ಸ್ವಾಮಿ, ನಿಮ್ಮ ಸರ್ಕಾರಕ್ಕೆ ಹೃದಯ ಅನ್ನೋದೇ ಇಲ್ಲವಾ? ಮನುಷ್ಯತ್ವ ಅನ್ನೋದೇ ಇಲ್ಲವಾ?
ನಿಮ್ಮ ದುರಾಡಳಿತಕ್ಕೆ ಇನ್ನೆಷ್ಟು ಅಮಾಯಕ ಸರ್ಕಾರಿ ನೌಕರರು, ಗುತ್ತಿಗೆದಾರರು ಬಲಿಯಾಗಬೇಕು? ಎಂದು ಅಶೋಕ್ ಚಾಟಿ ಬೀಸಿದ್ದಾರೆ.

