ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಜಿನಿಯರಿಂಗ್ ಕಾಲೇಜ್ನ ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ ಜ್ಯೂನಿಯರ್ ವಿದ್ಯಾರ್ಥಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
ಸಂತ್ರಸ್ತೆ ವಿದ್ಯಾರ್ಥಿನಿ ಈ ಕುರಿತು ಹನುಮಂತ ನಗರ ಪೊಲೀಸ್ ಠಾಣೆಗೆ ಅ.15 ರಂದು ದೂರು ನೀಡಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಕಾಲೇಜ್ನ ಶೌಚಾಲಯಕ್ಕೆ ಕಳೆದ ಅಕ್ಟೋಬರ್ 10 ರಂದು ಎಳೆದೊಯ್ದು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಹನುಮಂತ ನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 21 ವರ್ಷದ ಜೀವನ್ ಗೌಡ ಎಂಬ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ದೂರಿನ ಸಾರ-
ಅಕ್ಟೋಬರ್ 10ರಂದು ಬೆಳಗ್ಗೆ 8.55ಕ್ಕೆ ತರಗತಿಗೆ ಹಾಜರಾಗಿದ್ದೆ. ಆರೋಪಿ ಜೀವನ್ನಿಂದ ಕೆಲವೊಂದು ಸಾಮಗ್ರಿಗಳನ್ನು ಕಲೆಕ್ಟ್ ಮಾಡಿಕೊಳ್ಳಬೇಕಾಗಿದ್ದರಿಂದ ಲಂಚ್ ಬ್ರೇಕ್ನಲ್ಲಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದೆ.
ಲಂಚ್ ಬ್ರೇಕ್ನಲ್ಲಿ ಭೇಟಿಯಾದಾಗ ಜೀವನ್ ಸ್ವಲ್ಪ ಮಾತನಾಡಬೇಕು ಎಂದು ಹೇಳಿ ನನ್ನನ್ನು ಡೌನ್ ಸ್ಪೇರ್ಸ್ಗೆ ಕರೆದೊಯ್ದಿದ್ದ.
ಅಲ್ಲಿಂದ ಕಾಲೇಜ್ನ 7ನೇ ಮಹಡಿಯಲ್ಲಿರುವ ಪಿಜಿ ಬ್ಲಾಕ್ಗೆ ಕರೆದೊಯ್ದು ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದ್ದಾನೆ. ತಪ್ಪಿಸಿಕೊಂಡು 6ನೇ ಮಹಡಿಗೆ ಬಂದಾಗ ಬಲವಂತವಾಗಿ ಪುರುಷರ ಶೌಚಾಲಯದೊಳಗೆ ಎಳೆದೊಯ್ದು ಅಸಹಜವಾಗಿ ವರ್ತಿಸಿದ್ದಾನೆ.
ಬಳಿಕ ಡೋರ್ ಲಾಕ್ ಮಾಡಿ ಅಸಹಜವಾಗಿ ವರ್ತಿಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ನನ್ನ ಮೊಬೈಲ್ ಕೂಡ ಆತನೇ ತೆಗೆದುಕೊಂಡಿದ್ದು, ನನ್ನ ಸ್ನೇಹಿತರು ಕರೆ ಮಾಡಿದರೂ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ ಎಂದು ದೂರಿನಲ್ಲಿ ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಘಟನೆ ಬಗ್ಗೆ ಹೇಳಿದರೆ ಪೋಷಕರು ಆಘಾತಗೊಳ್ಳುತ್ತಾರೆ ಎಂದು ಮತ್ತು ಮುಜುಗರವಾಗಿ ಯಾರಿಗೂ ಹೇಳಿರಲಿಲ್ಲ. ಆದರೆ ಈ ಬಗ್ಗೆ ಆಪ್ತ ಸ್ನೇಹಿತರ ಬಳಿ ಹೇಳಿಕೊಂಡಾಗ ಅವರು ಧೈರ್ಯ ತುಂಬಿದ್ದರಿಂದ ಪೋಷಕರಿಗೆ ತಿಳಿಸಿ, ಹನುಮಂತನಗರ ಠಾಣೆಗೆ ತೆರಳಿ ದೂರು ನೀಡಿರುವುದಾಗಿ ಸಂತ್ರಸ್ತೆ ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅತ್ಯಾಚಾರ ಪ್ರಕರಣದ ಆರೋಪಿ ಬಂಧಿಸಿ ಕಾಲೇಜ್ ಕ್ಯಾಂಪಸ್ನೊಳಗಿರುವ ಸಿಸಿಟಿವಿ ಹಾಗೂ ದೈಹಿಕ ಹಿಂಸೆಯಬಗೆಗಿನ ಸಾಕ್ಷ್ಯಗಳನ್ನ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

