ವಿದ್ಯಾರ್ಥಿಗಳಿಗೆ ಡಾ. ಅಬ್ದುಲ್ ಕಲಾಂ ಸ್ಫೂರ್ತಿ ದಾಯಕ ವ್ಯಕ್ತಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಡಾ. ಅಬ್ದುಲ್ ಕಲಾಂ ರವರು ಕೋಟ್ಯಾಂತರ ವಿದ್ಯಾರ್ಥಿಗಳು ಹಾಗೂ ಯುವಕರ ಸ್ಫೂರ್ತಿ ದಾಯಕ ವ್ಯಕ್ತಿಯಾಗಿ, ಜ್ಞಾನಿಗಳಾಗಿ ,ಪ್ರೇರಕ ಶಕ್ತಿಯಾಗಿ ದ್ದಾರೆ ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು. 

ಅವರು ಋಗ್ವೇದಿ ಯೂತ್ ಕ್ಲಬ್, ಜೈಹಿಂದ್ ಪ್ರತಿಷ್ಠಾನ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅಬ್ಧುಲ್ ಕಲಾಂ ಜನ್ಮ ದಿನದಲ್ಲಿ ಮಾತನಾಡಿ  ಕಲಾಂ ರವರು ಭಾರತದ  ರಾಷ್ಟ್ರಪತಿಯಾಗಿ  ವಿಜ್ಞಾನಿಯಾಗಿ, ಶಿಕ್ಷಣ, ಬಾಹ್ಯಾಕಾಶ, ತಂತ್ರಜ್ಞಾನ, ಸಮಾಜ ಸೇವೆಯಲ್ಲಿ ಅಪಾರ ಅನುಭವವನ್ನು ವಿದ್ಯಾರ್ಥಿ ಹಾಗೂ ಯುವಕರಲ್ಲಿ ತಿಳಿಸಿ ಕೋಟಿ ಕೋಟಿ ಭಾರತೀಯರಲ್ಲಿ ಭಾರತೀಯರಾಗಿ ಅಪ್ಪಟ ದೇಶಭಕ್ತರಾಗಿ ಮಾದರಿಯಾಗಿದ್ದಾರೆ.

- Advertisement - 

ದೇಶದ ಹಿತ, ಬೆಳವಣಿಗೆ, ಅಭಿವೃದ್ಧಿ, ಸ್ಪೂರ್ತಿಯ ಶಕ್ತಿಯಾಗಿ ಮನಸ್ಸಿನಲ್ಲಿ ಉಳಿದಿದ್ದಾರೆ. ವಿಶ್ವದ ಬಾಹ್ಯಾಕಾಶ, ವಿಜ್ಞಾನದ  ಕೊಡುಗೆ ಮರೆಯಲು ಸಾಧ್ಯವಿಲ್ಲ. ಭಾರತ ರತ್ನ ಶ್ರೇಷ್ಠ ಪದವಿಯನ್ನು ಪಡೆದು ನೂರಾರು ಗೌರವಕ್ಕೆ ಪಾತ್ರವಾಗಿರುವ ಕಲಾಂರವರು ಭಾರತದ ಶಕ್ತಿಯ ವ್ಯಕ್ತಿ. ಪ್ರತಿಯೊಬ್ಬ ವ್ಯಕ್ತಿಯು ಕಲಾಂ ರವರ ದೊಡ್ಡ ಕನಸು ಹಾಗೂ  ಗುರಿಯ ಮೂಲಕ ಸಾಧನೆ ಮಾಡುವಲ್ಲಿ ಸ್ಪೂರ್ತಿ ತುಂಬಿದ್ದಾರೆ ಎಂದರು.

ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ  ಮಾತನಾಡಿ ವಿದ್ಯಾರ್ಥಿಗಳ ಶಕ್ತಿ ಕಲಾಂ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಲಾಂ ಆದರ್ಶ. ಬಡತನದಲ್ಲಿ ಅಪಾರ ಶ್ರಮ ಪಟ್ಟು ಉನ್ನತ ಶಿಕ್ಷಣ ಪಡೆದು ವ್ಯಕ್ತಿತ್ವ ರೂಪಿಸಿಕೊಂಡು, ದೇಶದ ಒಳಿತಿಗೆ ಮಾರ್ಗದರ್ಶನ ನೀಡಿದ ಮಹಾ ಪುರುಷ.

- Advertisement - 

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಕ್ಕಳ ವಿಕಾಸಕ್ಕಾಗಿ ಸಾವಿರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ರಾಷ್ಟ್ರಪತಿಯ ಗೌರವದ ನಡುವೆಯೂ ಪ್ರೀತಿಸಿದ ಸ್ಪೂರ್ತಿ ತುಂಬಿದ ಕಲಾಂ   ಮಮತೆಯ ವ್ಯಕ್ತಿ. ಮಕ್ಕಳಿಗೆ ವಿಜ್ಞಾನ, ಬಾಹ್ಯಾಕಾಶ, ಶಿಸ್ತು, ಏಕತೆ, ಸಾಮರಸ್ಯದ ವ್ಯಕ್ತಿಯಾಗಿ ಸದಾ ಇರುತ್ತಾರೆ ಎಂದರು.

ಝಾನ್ಸಿ ಮಕ್ಕಳ ಪರಿಷತ್ತಿನ ಅಧ್ಯಕ್ಷೆ ಶ್ರಾವ್ಯ ಎಸ್ ಋಗ್ವೇದಿ ಮಾತನಾಡಿ ಕಲಾಂರವರ ಜೀವನ ಏಳಿಗೆ ಹಾಗೂ ಸಾಧನೆಯ ವಿವರವನ್ನು ಪ್ರಾಸ್ತಾವಿಕವಾಗಿ  ವಿವರಿಸಿ

ಕಲಾಂ ಜನ್ಮ ದಿನ ಸ್ಪೂರ್ತಿಯ ದಿನ, ಕನಸು ಕಟ್ಟಿಕೊಳ್ಳುವ , ಗುರಿ ಸಾಧಿಸುವ ದಿನವಾಗಿ  ಪ್ರೇರಣೆ  ನೀಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಭೋಜರಾಜ್, ಬಸಪ್ಪ, ಕುಮಾರ್, ಶಾಂತಮ್ಮ, ಕುಸುಮ, ಭರತ್, ಇದ್ದರು.

Share This Article
error: Content is protected !!
";