ಚಂದ್ರವಳ್ಳಿ ನ್ಯೂಸ್, ಹಿರಿಯೂರು:
2025 ಸಾಲಿನ ವರ್ಷದಲ್ಲಿ 2ನೇ ಬಾರಿಗೆ ಮತ್ತು ಡ್ಯಾಂ ನಿರ್ಮಾಣದಿಂದ ಇಲ್ಲಿಯ ತನಕ ಅಂದರೆ ಇತಿಹಾಸದಲ್ಲಿ 4ನೇ ಬಾರಿಗೆ ವಾಣಿ ವಿಲಾಸ ಸಾಗರದ ಜಲಾಶಯ ಭರ್ತಿಯಾಗಿ ಕೋಡಿ ಹರಿದಿದೆ.
ಭದ್ರಾ ಪಂಪ್ ಹೌಸ್ ನಿಂದ ನಿತ್ಯ ವಾಣಿ ವಿಲಾಸ ಸಾಗರಕ್ಕೆ ಲಿಫ್ಟ್ ಮಾಡುತ್ತಿರುವ ನೀರು ಸೇರಿದಂತೆ ವೇದಾವತಿ ನದಿ ಜಲಾನಯನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಬಿದ್ದ ಮಳೆಯಿಂದಾಗಿ ಶನಿವಾರ ನೀರಿನ ಒಳ ಹರಿವು ಹೆಚ್ಚಳವಾಗಿದೆ.

ಅಕ್ಟೋಬರ್-19ರಂದು ಭಾನುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 1945 ಕ್ಯೂಸೆಕ್ ಗೆ ನೀರಿನ ಒಳ ಹರಿವು ಇದ್ದು 130.00 ಅಡಿಗೆ ಏರಿಕೆಯಾಗುವ ಮೂಲಕ ಡ್ಯಾಂ ಭರ್ತಿಯಾಗಿ ಕೋಡಿ ಮೇಲೆ ನೀರು ಹೊರ ಹರಿಯುತ್ತಿದೆ.

