ಒಣ ತ್ಯಾಜ್ಯ ನಿರ್ವಹಣೆ ಘಟಕ ಪರಿಶೀಲಿಸಿದ ಡಿಸಿಎಂ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ನಾಗರಿಕರಿಗೆ ಸ್ಪಂದಿಸಲು ‘ಬೆಂಗಳೂರು ನಡಿಗೆ‘ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಒಣ ತ್ಯಾಜ್ಯ ನಿರ್ವಹಣೆಯ ಘಟಕಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಶಾಸಕರು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಅಧಿಕಾರಿಗಳು ಒಣ ತ್ಯಾಜ್ಯ ನಿರ್ವಹಣೆಯ ಘಟಕದ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು.
ಕಸ ನಿರ್ವಹಣೆ ಎಂಬುದು ಬೆಂಗಳೂರಿನ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಹೀಗಾಗಿ ಒಣ ತ್ಯಾಜ್ಯ ನಿರ್ವಹಣೆ ಅನಿವಾರ್ಯವಾಗಿದ್ದು, ಇದಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಲು ಬದ್ಧವಾಗಿದೆ ಎಂದು ಡಿಕೆ ಶಿವಕುಮಾರ ತಿಳಿಸಿದರು.

