ಹಿರಿಯ ಕಲಾವಿದರಿಗೆ ಗೌರವ ಅಭಿನಂದನೆ ಸಲ್ಲಿಸಿದ ಡಿಸಿಎಂ ಶಿವಕುಮಾರ್

News Desk
- Advertisement -  - Advertisement - 

ಹಿರಿಯ ಕಲಾವಿದರಿಗೆ ಗೌರವ ಅಭಿನಂದನೆ ಸಲ್ಲಿಸಿದ ಡಿಸಿಎಂ ಶಿವಕುಮಾರ್
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆಯೋಜಿಸಿದ್ದ ಜಗಮೆಚ್ಚಿದ ಕಲಾವಿದರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪಾಲ್ಗೊಂಡು ಅಭಿನಂದನೆ ಸಲ್ಲಿಸಿದರು.

2025ನೇ ಸಾಲಿನ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಕಲಾವಿದರಾದ ಅನಂತ್ ನಾಗ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಾಸನ್ ರಘು ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಕಲಾವಿದರಿಬ್ಬರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು ಎಂದು ಡಿಸಿಎಂ ತಿಳಿಸಿದರು.

- Advertisement - 

ನಟ ಅನಂತ್ ನಾಗ್ ಹಾಗೂ ಹಾಸನ್ ರಘು ಅವರು ನಮ್ಮ ನಾಡಿನ ಆಸ್ತಿ ಮತ್ತು ಹೆಮ್ಮೆ. ಕಲಾ ಸರಸ್ವತಿಯ ಪುತ್ರರಿಗೆ ಉತ್ತಮ ಆರೋಗ್ಯ ವೃದ್ಧಿಸಲಿ ಹಾಗೂ ಕನ್ನಡನಾಡಿನ ಅಸ್ಮಿತೆಯನ್ನು ಇನ್ನೂ ಇಡೀ ಜಗತ್ತಿಗೆ ಸಾರುವಂತಾಗಲಿ ಎಂದು ಡಿಸಿಎಂ ಶಿವಕುಮಾರ್ ಶುಭಹಾರೈಸಿದರು.

- Advertisement - 

 

Share This Article
error: Content is protected !!
";