ಅಕ್ಟೋಬರ್-24ರಂದು ಅಸ್ತಮಾ ಮತ್ತು ಅಲರ್ಜಿ ಶಿಬಿರ
ಚಂದ್ರವಳ್ಳಿ ನ್ಯೂಸ್, ತುಮಕೂರು:
ನಗರದ ಎಸ್.ಎಸ್.ಪುರಂ ೩ನೇ ಕ್ರಾಸ್ನ ಗಾಣದಾಳ್ ಕಿವಿ, ಮೂಗು, ಗಂಟಲು ಮತ್ತು ದಂತ ಆಸ್ಪತ್ರೆಯಲ್ಲಿ ಅಕ್ಟೋಬರ್ ೨೪ ರಂದು ಶುಕ್ರವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಅಸ್ತಮಾ ಮತ್ತು ಅಲರ್ಜಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನುರಿತ ತಜ್ಞ ವೈದ್ಯ ಡಾ.ಮುನೀಶ್ವರ ಜಿ.ಬಿ. ಹಾಗೂ ಡಾ.ಪುನೀತ್ ಕೆ.ಎನ್.ರವರು ಭಾಗವಹಿಸಲಿದ್ದಾರೆ.
ಈ ಕೆಳಕಂಡ ರೋಗಿಗಳು ಅತಿಯಾಗಿ ಶೀನು ಬರುವುದು, ತುರಿಕೆ, ಕೆಮ್ಮು, ಉಸಿರಾಡಲು ತೊಂದರೆ, ಕಣ್ಣು ಕೆಂಪಾಗಿ ಉರಿಯುವುದು, ಮೈ ಉರಿ ಮತ್ತು ಬೆವರು ಸಾಲೆ, ಆಹಾರದ ಅಲರ್ಜಿ, ಧೂಳಿನ ಅಲರ್ಜಿ, ಸೀನುವುದು, ಮೂಗು ಕಟ್ಟುವುದು ಹಾಗೂ ಶ್ವಾಸಕೋಶದ ಪರೀಕ್ಷಾ ಲಭ್ಯ, ಅಲರ್ಜಿಯ ರಕ್ತ ಪರೀಕ್ಷೆ ಮತ್ತು ಸ್ಕಿನ್ ಪ್ರಿಕ್ ಟೆಸ್ಟ್ ಎಂಬ ಪರೀಕ್ಷೆಗಳಿಂದ ಕಂಡು ಹಿಡಿದು ಚಿಕಿತ್ಸೆ ನೀಡಲಾಗುವುದು.
ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಈ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೦೮೧೬-೨೨೭೧೨೨೫, ೭೭೬೦೫೯೨೭೬೦ ರವರನ್ನು ಸಂಪರ್ಕಿಸಲು ಕೋರಲಾಗಿದೆ.

