ಚಂದ್ರವಳ್ಳಿ ನ್ಯೂಸ್, ದೆಹಲಿ:
ರಾಜ್ಯ ಸರ್ಕಾರ ಆರ್ ಎಸ್ಎಸ್ ಕುರಿತು ತಾಳಿರುವ ವಿರುದ್ಧ ನಿಲುವಿಗೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ಹುನ್ನಾರ ಮಾಡುತ್ತಿರುವುದು ವಿಪರ್ಯಾಸ, ಎಲ್ಲರೂ ಸಂಜೆ ನಾಟಕ ಆಡಿದ್ರೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಹಗಲೇ ನಾಟಕ ಮಾಡುತ್ತಿದ್ದಾರೆ ಎಂದು ಸೋಮಣ್ಣ ಅವರು ಟೀಕಾಪ್ರಹಾರ ಮಾಡಿದ್ದಾರೆ.
ಈಗ ವಿರೋಧ ಮಾಡುವವರು ಮುಂದೆ ಆರ್‌ಎಸ್‌ಎಸ್ ಸದಸ್ಯರಾಗಲಿದ್ದಾರೆ. ಸಿದ್ದರಾಮಯ್ಯ ಇಷ್ಟು ಸುಳ್ಳು ಹೇಳುತ್ತಾರೆ ಅಂತಾ ಗೊತ್ತಿರಲಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಕಡೆ ಗಮನಹರಿಸಬೇಕಿದೆ ಎಂದು ದೆಹಲಿಯಲ್ಲಿ ಸೋಮಣ್ಣ ಕಿವಿ ಮಾತು ಹೇಳಿದ್ದಾರೆ.

