ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಂತ್ರಾಲಯದ ರಾಯರ ಸನ್ನಿಧಿಗೆ ತೆರಳಿ ಬೇಡಿಕೆ ಈಡೇರಿಸುವಂತೆ ಕೋರಿಕೊಂಡಿದ್ದಾರೆ.
ಮಂತ್ರಾಲಯದ ರಾಘವೇಂದ್ರಸ್ವಾಮಿ ದೇವರ ಭೇಟಿ ಬಳಿಕ ಸಮೀಪದ ಪಂಚಮುಖಿ ಆಂಜನೇಯ ದೇಗುಲದಲ್ಲಿ ಮಧು ಅಭಿಷೇಕ, 108 ಮಂತ್ರಗಳ ಮೂಲಕ ವಿಶೇಷ ಪುಷ್ಪಾರ್ಚನೆ ಸಲ್ಲಿಸಿದರು.
ದೀಪಾವಳಿ ಪಾಡ್ಯ, ಸ್ವಾತಿ ನಕ್ಷತ್ರದಲ್ಲಿ ಇಷ್ಟಾರ್ಥ ಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು. ಯಾವ ಸಂಕಲ್ಪ ಎಂಬ ಮಾಡಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ನಾನುಂಟು ಆಂಜನೇಯ ಉಂಟು ಅಂತಾ ಮಾರ್ಮಿಕವಾಗಿ ಹೇಳಿದರು.
ಆದರೆ ಡಿಕೆ ಸಂಕಲ್ಪದ ರಹಸ್ಯ ಬಿಟ್ಟಿಟ್ಟ ಪಂಚಮುಖಿ ಆಂಜನೇಯ ದೇಗುಲದ ಅರ್ಚಕ ಶಾಮಾಚಾರ್ಯ, ಸಿಎಂ ಆಗಬೇಕು ಅನ್ನೋದು ಅವರ ಆಸೆ. ಸಂಕಲ್ಪ ಮಾಡಿದ್ದಾರೆ ಸಿಎಂ ಆಗಿಯೇ ಆಗ್ತಾರೆ ಎಂದು ಭವಿಷ್ಯ ನುಡಿದ್ದಾರೆ.

