ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ದೇಶದ ಮೊದಲ ಮಹಿಳೆ ಕಿತ್ತೂರು ಚೆನ್ನಮ್ಮಾಜೀಯವರು ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಅಗತ್ಯವಿದ್ದು, ಮಹಿಳೆಯರ ಸ್ವಾವಲಂಬನೆ, ಧೈರ್ಯಕ್ಕೆ ಚೆನ್ನಮ್ಮ ಸ್ಪೂರ್ತಿ ಯಾಗ ಬೇಕಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸ್ವಾತಂತ್ರತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಂಕ್ರಮದಲ್ಲಿ ಅವರು ಮಾತನಾಡಿ
ಬ್ರಿಟೀಷರ ದೌರ್ಜನ್ಯ, ದರ್ಪಗಳ ವಿರುದ್ದ ಹೋರಾಟ ನಡೆಸಿದ್ದಲ್ಲದೆ, ಅವರು ವಿಧಿಸುತ್ತಿದ್ದ ಕರ ನಿರಾಕರಣೆ ಮಾಡಿ ದಿಟ್ಟತನದಿಂದ ಬಂದ ಸವಾಲುಗಳನ್ನು ಎದುರಿಸಿದ್ದ ಚೆನ್ನಮ್ಮ ಕನ್ನಡನಾಡಿನ ವೀರ ಮಹಿಳೆಯರಲ್ಲಿ ಅಗ್ರ ಪಂಕ್ತಿಗೆ ಸೇರಿದ್ದಾಳೆ. ಮಹಿಳೆಯರು ಘನತೆ ಮತ್ತು ನ್ಯಾಯವನ್ನು ಕಾಪಾಡುವುದರಲ್ಲಿ ಮುಂಚೂಣಿಯಲ್ಲಿರಬಹುದು ಎಂಬುದನ್ನು ತೋರಿಸಿಕೊಟ್ಟರು. ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ ಹಾಗೂ ಹೋರಾಟದ ಬದುಕು ದೇಶದ ಮಹಿಳೆಯರಿಗೆ ಸ್ಪೂರ್ತಿ ಯಾಗಿದ್ದು ಮಹಿಳೆಯರು ತಮಗಾಗುತ್ತಿರುವ ಅನ್ಯಾಯ ಹಾಗೂ ಶೋಷಣೆಯ ವಿರುದ್ದ ದನಿ ಎತ್ತುವ ಧೈರ್ಯದ ಬೆಳೆಸಿಕೊಳ್ಳಬೇಕು. ಇಂತಹ ಮಹನೀಯರ ಆಚರಣೆಗಳು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲರೂ ಆಚರಿಸಬೇಕು ಎಂದರು.
ಈ ಕಾರ್ಯ ಕ್ರಮದಲ್ಲಿ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮುಖಂಡರಾದ ನಾಗರತ್ನಮ್ಮ, ಬಿ.ಸಿ.ನಾರಾಯಣಸ್ವಾಮಿ, ಸಂಜೀವ್ ನಾಯಕ್, ,ಮುನಿಪಾಪಯ್ಯ ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ್ ಮೊದಲಾದವರು ಭಾಗವಹಿಸಿದ್ದರು.

