ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಾಮಿಯಾ ಮಸೀದಿಗೆ ಕರ್ನಾಟಕ ಸರ್ಕಾರದ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್ ಮಂಜುನಾಥ್ ರವರು ಗುರುವಾರ ಭೇಟಿ ನೀಡಿದ್ದರು.
ಭಾವೈಕ್ಯತಾ ಸಾರುವ ಮಸೀದಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರ ಜೊತೆ ಸಮಾಲೋಚನೆ ನಡೆಸಿದ ಜಿ.ಎಸ್.ಮಂಜುನಾಥ್ ಅವರು ಶುಭಾಶಯಗಳ ಕೋರಿದರು.
ಈ ಸಂದರ್ಭದಲ್ಲಿ ಜಿ ಎಸ್ ಮಂಜುನಾಥ್ ರವರಿಗೆ ಮಸೀದಿ ವತಿಯಿಂದ ಸನ್ಮಾನ ಮಾಡಲಾಯಿತು.
ಕಾಂಗ್ರೆಸ್ ಮುಖಂಡರಾದ ಆಸೀಫ್ ಅಲಿ, ಮಹಮದ್ ಅಲಿ, ಗ್ರಾಮ ಪಂಚಾಯಿತಿ ಸದಸ್ಯ ಮುನೀರ್, ಬ್ಲಾಕ್ ಕಾಂಗ್ರೆಸ್ sc ಸೆಲ್ ವಿಭಾಗದ ಅಧ್ಯಕ್ಷ ಜಿ.ಎಲ್ ಮೂರ್ತಿ, ಕೂನಿಕೆರೆ ರಫೀಕ್, ಮನುನಾಥ್ ಹಾಗೂ ಹೆಚ್.ಎಸ್ ಮಾರುತೇಶ್ ಸೇರಿದಂತೆ ಮತ್ತಿತರ ಮುಖಂಡರುಗಳು ಭಾಗವಹಿಸಿದರು.

