ಅನ್ನದಾತರ ಪ್ರತಿಭಟನೆಗೆ ಬೆಂಬಲ-ಭಾರತ ಕಮ್ಯುನಿಸ್ಟ್ ಪಕ್ಷ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಅಕ್ಟೋಬರ್ 28ರಂದು ನಡೆಯುತ್ತಿರುವ ಬಲವಂತದ ಭೂ-ಸ್ವಾಧೀನ ವಿರೋಧಿಸಿ ಅನ್ನದಾತರ ಬೃಹತ್ ಮೆರವಣಿಗೆ  ಮತ್ತು ಪ್ರತಿಭಟನೆಯಲ್ಲಿ ನಮ್ಮ ಸಿಪಿಐ(ಎಂ) ಪಕ್ಷವು ಬೆಂಬಲಿಸಿ ಭಾಗವಹಿಸಲಿದೆ ಎಂದು ಪಕ್ಷದ ಮುಖಂಡ ರೇಣುಕಾರಾಧ್ಯ ತಿಳಿಸಿದರು. 

ನಗರದಲ್ಲಿನ ಸಿಪಿಐ(ಎಂ) ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ  ದೊಡ್ಡ ಹೆಜ್ಜಾಜಿ, ಕಸಾಘಟ್ಟ, ಐನಹಳ್ಳಿ, ಕಾರೇಪುರ, ವೆಂಕಟೇಶಪುರ ಗ್ರಾಮಗಳ ಬಲವಂತದ ಭೂ-ಸ್ವಾಧೀನ ಮಾಡಲಾಗುತ್ತಿದ್ದು ಇದನ್ನ ವಿರೋಧಿಸಿತಾಲ್ಲೂಕು ಕಚೇರಿ ಎದುರು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು  ಸಿಪಿಐ(ಎಂ) ಪಕ್ಷವು ಸಂಪೂರ್ಣವಾಗಿ ಬೆಂಬಲಿಸಲು ನಿರ್ಧರಿಸಿದೆ ಎಂದರು.

- Advertisement - 

ಸರ್ಕಾರ ಶ್ವೇತ ಪತ್ರ ಹೊರಡಿಸಲಿ :
ಈವರೆಗೂ ನಮ್ಮ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ  ಕೆಐಎಡಿಬಿ. ಟೌನ್ ಷಿಪ್, ಬಿಡಿಎ, ಕೆಹೆಚ್‌ಬಿ, ಕ್ವಿನ್ ಸಿಟಿ, ಹೊರ ವರ್ತುಲ ರಸ್ತೆ, ಹೆದ್ದಾರಿಗಳು, ಏರೋಸ್ಪೇಸ್, ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಲಕ್ಷಾಂತರ ಎಕರೆ ಫಲವತ್ತಾದ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೆ ಬಲವಂತವಾಗಿ ಸರ್ಕಾರ ಸ್ವಾಧೀನ ಮಾಡಿಕೊಂಡಿದೆ. ಸ್ವಾದೀನಕ್ಕೆ ಒಳಗಾದ  ಸಾಕಷ್ಟು ಭೂಮಿಯಲ್ಲಿ ಯಾವುದೇ ಕಾಮಗಾರಿ ಅಥವಾ ಕೈಗಾರಿಕೆ ಇಲ್ಲದೆ ವ್ಯರ್ಥವಾಗಿ ಉಳಿದಿದೆ. ಸರ್ಕಾರವು ತಾನು ವಶಪಡಿಸಿಕೊಂಡಿರುವ ಭೂಮಿಯಲ್ಲಿ ಎಷ್ಟು ಕೈಗಾರಿಕೆಗಳು, ಸಾರ್ವಜನಿಕ ಅನುಕೂಲಕ್ಕಾಗಿ ಕೈಗೊಂಡಿರುವ ಕಾಮಗಾರಿಗಳ ಸಮಗ್ರ ಮಾಹಿತಿ ಒಳಗೊಂಡ ಶ್ವೇತ ಪತ್ರ  ಹೊರಡಿಸಲಿ ಆಗ ಸತ್ಯಾಮ್ಶ ತಿಳಿಯುತ್ತದೆ ಎಂದರು. 

ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಗೆ ಸೇರಿದ ಮೇಲ್ಕಂಡ ಐದು ಹಳ್ಳಿಗಳ 2670 ಎಕರೆ ಭೂಮಿಯಲ್ಲಿ ಅಡಿಕೆ, ತೆಂಗು, ರೆಷ್ಮೆ, ತರಕಾರಿ ಬೆಳೆಯುವ ತೋಟಗಳಿವೆ. ಕೋಳಿ, ಕುರಿ ಸಾಕಣೆ ಕೇಂದ್ರಗಳಿವೆ. ರೈತರ ಗಮನಕ್ಕೆ ತರದೆ ಗ್ರಾಮ ಸಭೆಗಳನ್ನು ನಡೆಸದೆ. ಸ್ಥಳೀಯ ಆಡಳಿತದ ಒಪ್ಪಿಗೆಯನ್ನು ಪಡೆಯದೆ ಇಂತಹ ಫಲವತ್ತಾದ ಭೂಮಿಯನ್ನು ಕರ್ನಾಟಕ ಗೃಹ ಮಂಡಳಿಯು ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವ ಈ ರೈತ ವಿರೋಧಿ ನಿಲುವು ಜೀವ ವಿರೋಧಿಯಾಗಿದೆ ಎಂದರು.

- Advertisement - 

ಭೂ-ಸ್ವಾಧೀನ ಪ್ರಕ್ರಿಯೆಯಿಂದಾಗಿ ಆಹಾರ ಭದ್ರತೆಗೆ ದಕ್ಕೆ :
ರೇಷ್ಮೆ ಉತ್ಪಾದನೆಗೆ ಇಡೀ ಭಾರತದಲ್ಲಿಯೇ ನಮ್ಮ ಜಿಲ್ಲೆ ಹೆಸರಾಗಿದೆ. ಲಕ್ಷಾಂತರ ಮಹಿಳೆಯರು ಹಾಲು ಉತ್ಪಾದನೆಯಲ್ಲಿ ತೊಡಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಗ್ರಾಮೀಣ ಪ್ರದೇಶವು ರಾಗಿಯ ಕಣಜವಾಗಿದೆ. ನಮ್ಮ ಉತ್ಪನ್ನಗಳಾದ ಹೂವು ಹಣ್ಣು, ತರಕಾರಿ, ಹಾಲು ಮುಂತಾದ ಪದಾರ್ಥಗಳನ್ನು ರಾಜಧಾನಿ ಮತ್ತು ಇತರೆ ಜಿಲ್ಲೆಗಳ ಜನ ಬಳಸುತ್ತಿದ್ದಾರೆ.ಇಂದಿಗೂ ಕೃಷಿ ಚಟುವಟಿಕೆಗಳು ಸಕ್ರಿಯವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ  ಭೂ-ಸ್ವಾಧೀನ ಪ್ರಕ್ರಿಯೆಯಿಂದಾಗಿ ಆಹಾರ ಭದ್ರತೆಗೆ ದಕ್ಕೆಯಾಗುತ್ತಿದೆ.

ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗಗಳನ್ನು ಮಾಡಲು ಗೊತ್ತಿರದ ಬಹುಪಾಲು ಸಣ್ಣ ರೈತರನ್ನು ಕೃಷಿ ಭೂಮಿಯಿಂದ ಹೊರದಬ್ಬುವುದು ಅತ್ಯಂತ ಕ್ರೂರ ಕ್ರಮವಾಗಿದೆ. ಇದರಿಂದ ರೈತರ ಬದುಕೆ ನಾಶವಾಗುತ್ತದೆ ಎಂದರು. 

ರೈತ ಹೋರಾಟಗಾರನನ್ನು ಗೆಲ್ಲಿಸಿ-ದೊಡ್ಡಬಳ್ಳಾಪುರ ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ಸ್ಪರ್ಧಿಸಿರುವ ತಿಪ್ಪೂರು ಗ್ರಾಮದ ಟಿ.ಎಸ್.ತಿಮ್ಮಯ್ಯ ಪರಿಶಿಷ್ಟ ಪಂಗಡ (ಎಸ್‌ಟಿ)ರವರು ನಾಮಪತ್ರ ಸಲ್ಲಿಸಿದ್ದು ಸದಾ ರೈತರ ಒಳಿತಾಗಾಗಿ ಶ್ರಮಿಸಿರುವ ಹೋರಾಟಗಾರರನ್ನು ಮತ ನೀಡುವ ಮೂಲಕ ಕೇಳ್ಲಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಸಿಪಿಐ (ಎಂ ) ಪಕ್ಷದ ತಾಲ್ಲೂಕು ಸಮಿತಿ ಸದಸ್ಯರಾದ ಎಂ.ಚೌಡಯ್ಯ, ಕೆ.ರಘುಕುಮಾರ್, ಸುಮ,ಅನಿಲ್‌ಗುಪ್ತ, ರೇಣುಕಾರಾಧ್ಯ, ಜಿ ನಟರಾಜು, ಎಸ್ ಎಂ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

Share This Article
error: Content is protected !!
";