ಕುಂಟು ನೆಪ ಹೇಳಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅತಿವೃಷ್ಟಿಯಿಂದ ನಲುಗಿ ಹೋಗಿರುವ ರೈತರು ಅಷ್ಟೋ ಇಷ್ಟೋ ಕೈಹಿಡಿದಿರುವ ಫಸಲನ್ನಾದರೂ ಒಳ್ಳೆ ಬೆಲೆಗೆ ಮಾರಿ ನಿಟ್ಟುಸಿರು ಬಿಡೋಣ ಅಂದ್ರೆ ಫ್ರೂಟ್ಸ್ ಐಡಿ ಇಲ್ಲ
, ಗುಣಮಟ್ಟ ಇಲ್ಲ,

ಉತ್ತಮ ಗೋಣಿಚೀಲದಲ್ಲಿ ತುಂಬಿಲ್ಲ ಎಂದು ಇಲ್ಲಸಲ್ಲದ ಕುಂಟು ನೆಪ ಹೇಳಿ ಖರೀದಿ ಮಾಡದೆ ಅನ್ನದಾತರನ್ನು ಸತಾಯಿಸುತ್ತಿದೆ ಈ ರೈತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

- Advertisement - 

ಕುರ್ಚಿ ಕಿತ್ತಾಟದಲ್ಲಿ ನೆರೆಭಾದಿತ ರೈತರ ಸಂಕಷ್ಟವನ್ನು ಸಂಪೂರ್ಣವಾಗಿ ಮರೆತಿರುವ ಸರ್ಕಾರ ರೈತರಿಗೆ ಇನ್ನಷ್ಟು ತೊಂದರೆ ಕೊಡದೆ ಈ ಕೂಡಲೇ ಹೆಸರು, ಸೂರ್ಯಕಾಂತಿ, ಉದ್ದಿನ ಕಾಳು, ಸೋಯಾಬೀನ್ ಖರೀದಿ ಆರಂಭ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಅಶೋಕ್ ಒತ್ತಾಯಿಸಿದ್ದಾರೆ.

 

- Advertisement - 

 

Share This Article
error: Content is protected !!
";