ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿಎಂ ಸಿದ್ದರಾಮಯ್ಯ ಕುರ್ಚಿ ಅಲ್ಲಾಡುತ್ತಿದೆ. ನ.15 ನೇ ತಾರೀಖು ದೆಹಲಿಗೆ ಹೋಗುತ್ತಾರೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.
ಚಿತ್ರದುರ್ಗದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಹೋಗುತ್ತಿದ್ದಾರೆ. ನ.15 ನಂತರ ಕ್ರಾಂತಿ ಕಾದು ನೋಡಬೇಕಿದೆ ಎಂದು ಸೂಚ್ಯವಾಗಿ ತಿಳಿಸಿದರು.
ಬಿಹಾರ ಎಲೆಕ್ಷನ್ ಘೋಷಣೆ ಆಗಿರುವ ಕಾರಣ ಸಚಿವರ ಜೊತೆ ಕಲೆಕ್ಷನ್ ಮಾಡುತ್ತಿದ್ದಾರೆ. ದೊಡ್ಡ ಮಟ್ಟದ ಹಣ ಬಿಹಾರ ಎಲೆಕ್ಷನ್ ಗೆ ಕೊಟ್ಟು ಕುರ್ಚಿ ಉಳಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಶ್ರೀರಾಮುಲು ಅವರು ಹೈಕಮಾಂಡ್ ಬಳಿ ಬಿಹಾರ ಎಲೆಕ್ಷನ್ ಹಿನ್ನೆಲೆ ಔತಣಕೂಟ ಕರೆದು 300 ಕೋಟಿ ವಸೂಲಿ ಮಾಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲ. 2028 ರವರೆಗೆ ನಾನೇ ಸಿಎಂ ಆಗಬೇಕು ಎಂಬ ಉದ್ದೇಶದಿಂದ ಹಣ ವಸೂಲಿ ನಡೆದಿದೆ. ಕೇರಳ, ಜಂಡಿಗಡ, ತಮಿಳುನಾಡಿನ ಎಲೆಕ್ಷನ್ ಗುರಿ ಇದೆ. ಮುಂಬರುವ ಎಲೆಕ್ಷನ್ ಗಳಿಗೆ ಕರ್ನಾಟಕ ಎಟಿಎಂ ಆಗಿದೆ ಎಂದು ಮಾಜಿ ಸಚಿವರು ಆರೋಪಿಸಿದರು.
ಇಲ್ಲಿಂದ ವಸೂಲಿ ಮಾಡಿ ಬಂಡವಾಳ ಹಾಕಿ ಸಿಎಂ ಕುರ್ಚಿ ಉಳಿಸಲು ಯತ್ನಿಸುತ್ತಿದ್ದಾರೆ. ಐದು ವರ್ಷ ಸಿಎಂ ಆಗುವ ಕನಸು ಸಿದ್ದರಾಮಯ್ಯ ಕಾಣುತ್ತಿದ್ದಾರೆ. ನವೆಂಬರ್ 20 ಕ್ಕೆ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ. ರಾಹುಲ್ ಗಾಂಧಿ ಬಂದಾಗ ಶಾಸಕರ ಅಭಿಪ್ರಾಯ ಪಡೆಯುವ ಸಾಧ್ಯತೆ ಇದೆ ಎಂದು ಶ್ರೀರಾಮುಲು ಹೇಳಿದರು.
ನ.15 ಬಳಿಕ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ. 50:50 ಅನುಪಾತದಲ್ಲಿ ಸಿಎಂ ಹುದ್ದೆ ಕುರಿತು ಅಭಿಪ್ರಾಯ ಇದೆ. ರಾಹುಲ್ ಗಾಂಧಿ ಬಂದು ಹೋದ ನಂತರ ಕ್ಲಯರ್ ಮೆಸೇಜ್ ಸಿಗುತ್ತದೆ. ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಆರೋಪಿಸಿದರು.
ಸಿಎಂ ಹುದ್ದೆಗೆ ಸೂಟ್ ಗೇಸ್ ರಾಜ್ಯದಲ್ಲಿ ರೆಡಿ ಇದೆ. ಸಿಎಂ ಹುದ್ದೆ ಹರಾಜಿನಲ್ಲಿ ಖರೀದಿ ಮಾಡಲು ಸಿದ್ದರಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಸಾಧನೆ ಶೂನ್ಯ. ಬಿಜೆಪಿ ಪಕ್ಷ ಅಧಿಕಾರ ಇದ್ದಾಗ ಚಿತ್ರದುರ್ಗ ಎಷ್ಟೋ ಅಭಿವೃದ್ಧಿ ಆಗಿತ್ತು ಎಂದು ಅವರು ಹೇಳಿದರು.
ಒಂದು ಕಡೆ ಸಿದ್ದರಾಮಯ್ಯ ಬಣ, ಡಿಕೆಶಿ ಬಣ ರಾಜ್ಯದಲ್ಲಿ ಇದೆ. ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಅಗಿದೆ. ಡಿಕೆಶಿ ಅವರು ಬೇರೆಯವರು ಮಾತನಾಡಿದ್ರೆ ನೋಟಿಸ್ ಕೊಡ್ತಾರೆ. ಯತೀಂದ್ರ ಅವರಿಗೆ ಯಾಕೆ ನೋಟಿಸ್ ಕೊಡ್ಲಿಲ್ಲ? ಅಷ್ಟು ದೈರ್ಯ ಡಿಕೆ ಶಿವಕುಮಾರ್ ಅವರಿಗೆ ಇಲ್ಲ ಅನ್ನಿಸುತ್ತದೆ ಎಂದು ಶ್ರೀರಾಮುಲು ಟಾಂಗ್ ನೀಡಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಹೆಚ್ಚಿದೆ. ಮಧ್ಯತಂರ ಚುನಾವಣೆಗೆ ನಾವು ರೆಡಿ ಇದ್ದೇವೆ. ಯತೀಂದ್ರ ಅವರ ಮಾತು ಸಿದ್ದರಾಮಯ್ಯ ಅವರ ಮಾತಾಗಿದೆ. ಸತೀಶ್ ಜಾರಕಿಹೊಳಿ ದೊಡ್ಡ ನಾಯಕರು. ವಾಲ್ಮೀಕಿ ಸಮುದಾಯದ ಕೂಡಾ ದೊಡ್ಡ ಜನಾಂಗ ಇದೆ. ಕಷ್ಟ ಪಟ್ಟವರಿಗೆ ಅಧಿಕಾರ ಸಿಗಬೇಕಿದೆ ಎಂದು ಸತೀಶ್ ಜಾರಕಿಹೊಳಿ ಪರ ಶ್ರೀರಾಮುಲು ಬ್ಯಾಟಿಂಗ್ ಮಾಡಿದರು.
ಸತೀಶ್ ಅಣ್ಣ ಸಿಎಂ ಆದರೆ ನಮಗೆ ಸಂತೋಷ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದಲ್ಲಿ ಯಾರೇ ಸಿಎಂ ಆಗಬೇಕು ಅಂತ ನಿರ್ಧಾರ ಮಾಡಲಿ. ಸಿದ್ದರಾಮಯ್ಯ ಅಧಿಕಾರ ಬಹುತೇಕ ಬಿಡಲ್ಲ, ಬಿಟ್ರೆ, ಡಿಕೆಶಿ ಅವರಿಗೆ ಮಾತ್ರ ಬಿಡಲ್ಲ. ಹೊಸ ಗಾಡಿಗಳ ಖರೀದಿ, ಕಾನ್ವೇ ಕೂಡಾ ರೆಡಿ ಮಾಡಿದ್ದಾರೆ ಎಂದು ದೂರಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಮಾಡಿದ್ರು ಕೂಡಾ ಆಶ್ಚರ್ಯ ಇಲ್ಲ. ಸಿದ್ದರಾಮಯ್ಯ ಬದಲಾವಣೆ ಆಗುವ ಪರಿಸ್ಥಿತಿ ಬಂದ್ರೆ, ಡಿಕೆಶಿ ಬದಲಾಗಿ ಬೇರೆಯವರು ಆಗಬಹುದು. ಸಿದ್ದರಾಮಯ್ಯ ಅವರಿಗೆ ಹತ್ತಿರ ಇರುವ ವ್ಯಕ್ತಿ ಸತೀಶ್ ಜಾರಕಿಹೊಳಿ. ಸತೀಶ್ ದುಡಿದ ಕಾರಣಕ್ಕೆ ಅವರನ್ನೇ ಉತ್ತಮ ವ್ಯಕ್ತಿ ಆಗಿದ್ದಾರೆ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟರು.
ಮದಕರಿ ನಾಯಕ ಥೀಮ್ ಪಾರ್ಕ್ ವಿಚಾರ ಕುರಿತು ಮಾತನಾಡಿದ ಅವರು 2018 ರಲ್ಲಿ ಅಮೀತ್ ಶಾ ಚುನಾವಣಾ ಪ್ರಚಾರಕ್ಕೆ ಬಂದಿದ್ರು, ಮದಕರಿ ನಾಯಕ ಥೀಮ್ ಪಾರ್ಕ್ ವಿಚಾರ ಎತ್ತಿದ್ದರು. ಜಿಲ್ಲೆಯಲ್ಲಿ ಐದು ಸ್ಥಾನ ನಾವು ಗೆದ್ದಿದ್ದೇವು. ರಾಜ್ಯದಲ್ಲಿ 102 ಸ್ಥಾನ ಪಡೆದು ಅಧಿಕಾರ ಮಾಡಿದ್ದೇವೆ.
ಆದರೆ ಬೇರೆ ಬೇರೆ ಕಾರಣದಿಂದಾಗಿ ಥೀಮ್ ಪಾರ್ಕ್ ಆಗಿಲ್ಲ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಮದಕರಿ ನಾಯಕ ಥೀಮ್ ಪಾರ್ಕ್ ಮಾಡುತ್ತೇವೆ. ಮದಕರಿ ನಾಯಕ ಜಯಂತಿ ಸರ್ಕಾರದ ಜಯಂತಿ ಆಗಬೇಕು. ಮದಕರಿ ನಾಯಕ ವಂಶಸ್ಥರನ್ನ ಬಡತನದಿಂದ ಹೊರ ತರಬೇಕು ಎಂದು ಹೇಳಿದರು.
ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಮದಕರಿ ಜಯಂತಿ ಆಗಬೇಕು.
ಮುಂದಿನ ನಮ್ಮ ಸರ್ಕಾರದಲ್ಲಿ ಮದಕರಿ ಜಯಂತಿ ಮಾಡುತ್ತೇವೆ ಎಂದರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಮರು ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಬಿಟ್ಟು ಕೊಡಬೇಕಿತ್ತು ಹಿಂದೆ ಇಲ್ಲಿಂದ ಬಳ್ಳಾರಿ ಹೋದೆ. ಮುಂದಿನ ದಿನಗಳಲ್ಲಿ ಮಧ್ಯ ಕರ್ನಾಟಕದದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸುತ್ತೇವೆ ಎಂದು ಶ್ರೀರಾಮುಲು ಹೇಳಿದರು.

