ಪತ್ರಕರ್ತನ ಕುಟುಂಬಕ್ಕೆ 2ಲಕ್ಷ ಬಿಡುಗಡೆ ಮಾಡಿದ‌-ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿ ಪತ್ರಕರ್ತ ವೀರೇಶ್ ಜಿ.ಕೆ. ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ.

ವಿಜಯ ಕರ್ನಾಟಕ ಪತ್ರಿಕೆ ಬಳ್ಳಾರಿ ಬ್ಯೂರೋದಲ್ಲಿ ಉಪ ಸಂಪಾದಕನಾಗಿದ್ದ ವೀರೇಶ್ ಜಿ.ಕೆ. (ವೀರೇಶ್ ಕಟ್ಟೆಮ್ಯಾಗಳ) ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು.

- Advertisement - 

ಅವರ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪತ್ರ ಬರೆದು ಸರ್ಕಾರದ ಗಮನಕ್ಕೆ ತಂದಿದ್ದರು. ಹಾಗಾಗಿ ಬಾಕಿ ಇದ್ದ ಕಡತ ವಿಲೇವಾರಿಗೆ ಸಿಎಂ ಸೂಚಿಸಿದ್ದರು.

ಕೆಯುಡಬ್ಲ್ಯೂಜೆ ಮನವಿ ಮೇರೆಗೆ ಪರಿಹಾರ ಮಂಜೂರು ಮಾಡಿದ ಸಿಎಂ‌ಸಿದ್ದರಾಮಯ್ಯ‌ಅವರಿಗೆ, ಈ ನಿಟ್ಟಿನಲ್ಲಿ ಸಹಕಾರ ನೀಡಿದ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಧನ್ಯವಾದ ಸಲ್ಲಿಸಿದೆ.

- Advertisement - 

Share This Article
error: Content is protected !!
";