ಚಂದ್ರವಳ್ಳಿ ನ್ಯೂಸ್, ದೆಹಲಿ:
(ಪುನೀತ್ ಚಿತ್ರಕಾವ್ಯ)
ಮಂದಹಾಸದ ಅಂದಗಾರ ಎಂದೆಂದಿಗೂ ಅಜರಾಮರ…
(ಪುನೀತ್ ರಾಜಕುಮಾರ್ ಅವರ 46 ಚಿತ್ರಗಳಿಂದ ರಚಿತವಾದ ಕವನ)
ವರನಟನ ಪ್ರೇಮದ ಕಾಣಿಕೆಯಾಗಿ ಪರಿಚಯವಾದೆ
ಭಕ್ತ ಪ್ರಹ್ಲಾದನಾಗಿ ಭಗವಂತನ ಮಹಿಮೆ ತಿಳಿಸಿದೆ.
ಬೆಟ್ಟದ ಹೂವನ್ನು ತಂದು ಬೆಟ್ಟದಷ್ಟು ಸಾಧಿಸಿದೆ.
ತಾಯಿಗೆ ತಕ್ಕ ಮಗನಾಗಿ ಶ್ರೀರಾಮನಂತೆ ತಂದೆಯ ಆದರ್ಶ ಪಾಲಿಸಿದೆ.
ಪರಶುರಾಮದಲ್ಲಿ ಪೌರುಷ ಮೆರೆದು ಶಿವ ಮೆಚ್ಚಿದ ಕಣ್ಣಪ್ಪ ನಾದೆ.
ಸನಾದಿ ಅಪ್ಪಣ್ಣ, ವಸಂತಗೀತ ದಲ್ಲಿ ಮಗುವಾಗಿ ನಟಿಸಿ ಮಾಯಾಬಜಾರ್ ಸೃಷ್ಟಿಸಿದೆ.
ಕರುನಾಡಿಗೆ ವೀರ ಕನ್ನಡಿಗನಾಗಿ ಹೊಸಬೆಳಕು ತಂದೆ.
ದೊಡ್ಮನೆ ಹುಡುಗ ನೀನು ಅಣ್ಣಾಬಾಂಡ್ ಆಗಿ ಬಂದು ಚಕ್ರವ್ಯೂಹ ಭೇದಿಸಿದೆ.
ಯಾರಿವನು ಎಂದು ಅಚ್ಚರಿಪಡುವಂತೆ ಸಾಧಿಸಿದೆ ರಣವಿಕ್ರಮ ನಂತೆ
ನಮ್ಮ ಬಸವ ಆಗಿ ಬಂದು ರಂಜಿಸಿ ಮೌರ್ಯ ಚಕ್ರವರ್ತಿಯಂತೆ ಬಾಳಿದೆ.
ಪೃಥ್ವಿಯಲ್ಲಿ ಬಂಧು ಜಾಕಿ ಜಾಕಿ ಎಂದು ಬಿಂದಾಸ್ ಆಗಿ ಕುಣಿದು ಕುಪ್ಪಳಿಸಿದೆ ನೀನು
ಅಪ್ಪು ಅಪ್ಪು ಎಂದು ಆಕಾಶಕ್ಕೆ ಕೇಳುವಂತೆ ಕೂಗಿ ಕೇಕೆ ಹಾಕಿದೆವು ನಾವು.
ಕಾಣದಂತೆ ಮಾಯವಾದನು ಎಂದು ಹಾಡುತ್ತಾ ಸೃಷ್ಟಿಯ ಬಗೆ ಸಾರಿದೆ ನೀನು ಯಾರೇ ಕೂಗಾಡಲಿ ಎಂದು ಸರ್ವರಿಗೂ ಲೇಸನ್ನೇ ಬಯಸಿದ ರಾಜ್-ವಂಶಿ ನೀನು.
ನಮ್ಮಂತ ಹುಡುಗರಿಗೆ, ಪವರ್ ಬಂದಿದ್ದೆ ನಿನ್ನಿಂದಲೇ, ನಿನ್ನ ಮೈತ್ರಿಯಿಂದಲೇ
ನಟಿಸಿದ ಎಲ್ಲಾ ಚಿತ್ರದಲ್ಲೂ ನಟಸಾರ್ವಭೌಮ ನಂತೆ ಅಭಿನಯಿಸಿ ಅಜಯ್ ನಾದೆ.
ಅಂಜನಿಪುತ್ರ ನಾಗಿ ಬಂದು ಮನಸೂರೆಗೊಂಡೆ ಕವಲು ದಾರಿಲಿ ನೆಡೆದು ಗೆದ್ದು ಬಂದೆ ನಿನ್ನಂತ ಭಾಗ್ಯವಂತ ನ ಪಡೆದ ನಾವು-ನಮ್ಮ ಕರುನಾಡೆ ಧನ್ಯ.
ದಾನಶೂರ ಕರ್ಣನಂತೆ ಈ ಭೂಮಿಗೆ ಬಂದ ಭಗವಂತ ನೀನು
ನಿನ್ನ ಎರಡು ನಕ್ಷತ್ರಗಳಿಂದ ನಾಲ್ವರಿಗೆ ದಾರಿದೀಪವಾದೆ.

ಅಭಿಮಾನಿಗಳ ಅರಸು ಆಗಿ ಮನೆ-ಮನಗಳ ರಾಜಕುಮಾರನಾಗಿ
ನಗುವಿನ ಒಡೆಯನಾಗಿ ಆವರಿಸಿಕೊಂಡೆ ನೀನು ನಮ್ಮ ಪರಮಾತ್ಮನಾಗಿ.
ಮಿಲನದಲಿ ಮೋಡಿ ಮಾಡಿ ಚಲಿಸುವ ಮೋಡಗಳಲಿ ಲೀನವಾದೆ ಜೇಮ್ಸ್ ಆಗಿ ಯುವರತ್ನ ನಾಗಿ ನಮ್ಮೆಲ್ಲರ ಹೃದಯದಲ್ಲಿ ಸದಾ ಅಜರಾಮರವಾಗಿರುವೆ.
ಕವಿತೆ-ವೆಂಕಟೇಶ. ಹೆಚ್, ಚಿತ್ರದುರ್ಗ,(ನವ ದೆಹಲಿ) 7760023887.

