ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ನೆಹರೂ ನಗರವಾಸಿ ಆರ್ ಎಸ್. ಬಸವರಾಜ್( ಬೆಲ್ಲದಂಗಡಿ ರಾಜಣ್ಣ)(80) ಬುಧವಾರ ಸಂಜೆ ಲಿಂಗೈಕ್ಯರಾಗಿದ್ದಾರೆ.
ಎಪಿಎಂಸಿ ಯಾರ್ಡನಲ್ಲಿ ಕಲ್ಲೇಶ್ವರ ಸ್ಟೋರ್ಸ್ ಬೆಲ್ಲದ ಅಂಗಡಿ ಮಾಲೀಕರಾಗಿದ್ದ ಇವರು ಕಲ್ಲೇಶ್ವರ ರಾಜಣ್ಣ ಎಂದೇ ಚಿರಪರಿಚಿತರಾಗಿದ್ದರು.
ಒಳ್ಳೆಯ ಸ್ನೇಹಜೀವಿಯಾಗಿದ್ದು ಅಪಾರ ಸಂಖ್ಯೆಯ ಸ್ನೇಹಿತರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಹಾಗೂ ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ನೀಡಲೆಂದು ಶ್ರೀ ಗುರು ಮುರುಘೇಶ ಹಾಗೂ ಭಗವಂತನಲ್ಲಿ ಸ್ನೇಹಿತರು ಪ್ರಾರ್ಥಿಸಿದ್ದಾರೆ.
ಬೆಲ್ಲದಂಗಡಿ ರಾಜಣ್ಣ ಅವರ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಗುರುವಾರ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

