ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
1994-95 ರಿಂದ ಚಳ್ಳಕೆರೆ ನಗರಸಭೆಯಲ್ಲಿ ನೇರಪಾವತಿಯಡಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೂ ಖಾಯಂಗೊಳಿಸಿಲ್ಲ. ನಿವೇಶನ ಕೂಡ ನೀಡಿಲ್ಲ. ಕೇವಲ ಮರ‍್ನಾಲ್ಕು ವರ್ಷ ಸೇವೆ ಇದೆ.
ಖಾಯಂ ಆಗದಿದ್ದರೆ ಹೆಂಡತಿ ಮಕ್ಕಳು ಬೀದಿಗೆ ಬೀಳುತ್ತಾರೆ. ದಯಮಾಡಿ ಖಾಯಂಗೊಳಿಸಿ ನೇಮಕಾತಿ ಆದೇಶ ನೀಡುವಂತೆ ಚಳ್ಳಕೆರೆ ಜಯಣ್ಣ ಆಯೋಗದ ಅಧ್ಯಕ್ಷ ಪಿ.ರಘು ಅವರಲ್ಲಿ ಕೇಳಿಕೊಂಡರು.
ಅದೇ ರೀತಿ ಪೌರಕಾರ್ಮಿಕ ಜಗನ್ನಾಥ್ ಕೂಡ, ತಮ್ಮ ವೇತನದಲ್ಲಿ ಪಿ.ಎಫ್. ಐ.ಎಸ್.ಐ ಕಟಾವಣೆ ಮಾಡಿದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ.
ತಿಂಗಳ ವೇತನ ಪ್ರಮಾಣ ಪತ್ರ ಕೇಳಿದರೂ ನೀಡುತ್ತಿಲ್ಲ. ತಿಂಗಳ 5 ತಾರೀಖಿನ ಒಳಗೆ ವೇತನ ಪಾವತಿಯಾಗುತ್ತಿಲ್ಲ ಎಂದು ಅವಹಾಲು ಹೇಳಿಕೊಂಡರು.

