ಕುಮಾರಿ ಕಾವ್ಯ ಕುಬೇರಪ್ಪ ಕಣ್ಮರೆ, ಪತ್ತೆಗೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಹೊನ್ನಾಳಿ:
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೆಚ್ ಗೋಪಗೊಂಡನಹಳ್ಳಿ  ಗ್ರಾಮದ ಕಾವ್ಯ .ಎಂ(21) ತಂದೆ ಕುಬೇರಪ್ಪ ಎಂ. ಇವರು ಕಣ್ಮರೆಯಾಗಿದ್ದಾರೆ.

ಕಣ್ಮರೆಯಾಗಿರುವ ಕಾವ್ಯ ಕುಬೇರಪ್ಪ ಇವರು 5.2 ಅಡಿ ಎತ್ತರ ಇದ್ದು ದಪ್ಪ ಮೈಕಟ್ಟು ಹೊಂದಿರುತ್ತಾರೆ. ಎಡಗಡೆ ಹುಬ್ಬು ಹತ್ತಿರ ಜೋಳದ ಕಾಳು ಗಾತ್ರದ ಮಚ್ಚೆ ಮತ್ತು ಬಲಗೈ ಮೇಲೆ Mam & Dad ಅಂತಾ ಇರುತ್ತದೆ.

- Advertisement - 

ಕನ್ನಡ ಭಾಷೆ ಮಾಡುತ್ತಾರೆ. 2025ರ ಅಕ್ಟೋಬರ್-29 ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ಮನೆಯಿಂದ ಹೋಗುವಾಗ ನೀಲಿ ಕಲರ್ ಚೂಡಿದಾರ, ಬಿಳಿ ಕಲರ್ ವೇಲು ಧರಿಸಿರುತ್ತಾಳೆ.

ಪುತ್ರಿ ಕಣ್ಮರೆಯಾಗಿರುವ ಬಗ್ಗೆ ತಂದೆ ಕುಬೇರಪ್ಪ ಇವರು ಪೊಲೀಸ್ ಠಾಣೆಗೆ ದೂರು ನೀಡಿ ಪತ್ತೆ ಮಾಡುವಂತೆ ಮನವಿ ಮಾಡಿರುತ್ತಾರೆ.

- Advertisement - 

ಕಣ್ಮರೆ ಆಗಿರುವ ಕಾವ್ಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕೂಡಲೇ ಪೊಲೀಸ್ ಹೆಲ್ಪ್ ಲೈನ್ ನಂ: 112, ದಾವಣಗೆರೆ ನಿಸ್ತಂತು ಕೇಂದ್ರ: 08192-253100, ಹೊನ್ನಾಳಿ ಪೊಲೀಸ್ ಠಾಣೆ ಫೋನ್ ನಂ: 08188-251100, ಸೆಲ್ ನಂ: 9480803263, 9480803235, ಪೊಲೀಸ್ ಉಪಾಧೀಕ್ಷಕರು,

ಚನ್ನಗಿರಿ ಉಪ-ವಿಭಾಗ: 08192-262550: ಸೆಲ್ ನಂ: 9480803223 ಇಲ್ಲಿಗೆ ಮಾಹಿತಿ ನೀಡುವಂತೆ ಹೊನ್ನಾಳಿ ಪೊಲೀಸ್ ನಿರೀಕ್ಷಕರು ಮನವಿ ಮಾಡಿದ್ದಾರೆ.

Share This Article
error: Content is protected !!
";