ಸಂಸದ ತೇಜಸ್ವಿ ಸೂರ್ಯಗೆ ಲೇವಡಿ ಮಾಡಿದ ಡಿಕೆ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಸಿಎಂ ಅವರು ಶಾಸಕ ರಾಮಮೂರ್ತಿ, ಸಂಸದ ತೇಜಸ್ವಿ ಸೂರ್ಯಗೆ ಧಮ್ಕಿ ಹಾಕಿದ್ದಾರೆಂಬ ವಿಪಕ್ಷ ನಾಯಕ ಆರ್​. ಅಶೋಕ್​​ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಶಾಸಕ ರಾಮಮೂರ್ತಿಗೆ ಏಕೆ ಧಮ್ಕಿ ಹಾಕಲಿ, ಅವನು ನಮ್ಮ ಹುಡುಗ ಎಂದು ತಿಳಿಸಿದರು.

ಇನ್ನೂ ಸಂಸದ ತೇಜಸ್ವಿ ಸೂರ್ಯ ಅತಿ ಬುದ್ಧಿವಂತ, ದೊಡ್ಡ ನಾಯಕ ಎಂದು ಡಿಕೆ ಶಿವಕುಮಾರ್ ಕಾಲೆಳೆದರು.
ಸಂಸದ ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಡೋರ್​ ಓಪನ್ ಮಾಡಿ ಮುಜುಗರಕ್ಕೆ ಒಳಗಾಗಿದ್ದ.

- Advertisement - 

ಅಮೆರಿಕದಲ್ಲಿ ಟ್ರಂಪ್ ಭೇಟಿ ಮಾಡುವುದಕ್ಕೆ ಹೋಗಿ ಉಗಿಸಿಕೊಂಡಿದ್ದ. ಸಂಸದ ತೇಜಸ್ವಿ ಸೂರ್ಯ ಕಾರು ಬೇಡ ಅಂತ ಹೇಳುತ್ತಾರೆ. ಆದರೆ ಮದುವೆಗೆ ಕಾರ್ಡ್ ಕೊಡೋಕೆ ಬಂದು ಕಾರು ಬುಕ್ ಮಾಡಿದ್ದಾನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿ ಕಿಡಿ ಕಾರಿದ್ದಾರೆ.

 

- Advertisement - 

 

 

Share This Article
error: Content is protected !!
";