ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಎಂಸಿಎಸ್) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಶೇ.93.98ರಷ್ಟು ಮತದಾನ ನಡೆದಿದೆ. ‘ಬಿ‘ ತರಗತಿಯಿಂದ ಒಟ್ಟು 5,571 ಮತದಾರರ ಪೈಕಿ 5,238 ಮತಗಳು ಚಲಾವಣೆಯಾಗಿವೆ.
ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗುವವರೆಗೂ ರೈತರು ಉತ್ಸಾಹದಿಂದಲೇ ಮತಚಲಾವಣೆ ಮಾಡಿದರು. ಸಂಜೆ 4 ಗಂಟೆ ನಂತರ ಮತಗಳ ಎಣಿಕೆ ಪ್ರಾರಂಭಿಸಲಾಯಿತು. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಿರ್ವಹಣೆ ಮಾಡುವ ಸಲುವಾಗಿಯೇ 20 ಜನ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ಗೊಂದಲುಗಳು ಉಂಟಾಗಿಲ್ಲ. ಮತ ಚಲಾವಣೆಗೆ ಕಾದು ನಿಲ್ಲುವುದನ್ನು ತಪ್ಪಿಸಲು 12 ಕೊಠಡಿಗಳ ಮತಚಾವಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ಕೊಠಡಿಯಲ್ಲೂ ಏಕ ಕಾಲಕ್ಕೆ ಜನರು ಪ್ರತ್ಯೇಕವಾಗಿ ಮತಪತ್ರಗಳ ಮೂಲಕ ಗುಪ್ತ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿತ್ತು.
ಚುನಾವಣೆಯಲ್ಲಿ ‘ಬಿ‘ ತರಗತಿಯಿಂದ ಜೆಡಿಎಸ್, ಬಿಜೆಪಿ ಮೈತ್ರಿ ಬೆಂಬಲಿತ ಐದು ಅಭ್ಯರ್ಥಿಗಳು ಜಯಗಳಿಸಿದ್ದಾರೆ ಹಾಗೂ ಕಾಂಗ್ರೆಸ್ ಬೆಂಬಲಿತ ಮೂವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ.
‘ಎ‘ತರಗತಿ ಫಲಿತಾಂಶಕ್ಕೆ ತಡೆ:
ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಎಂಸಿಎಸ್) ನಿರ್ದೆಶಕ ಸ್ಥಾನಕ್ಕೆ ಎ ತರಗತಿಯಿಂದ 9 ಮಂದಿ ಸ್ಪರ್ಧಿಸಿದ್ದರು. 2 ವಿಎಸ್‌ಎಸ್‌ಎನ್‌ಗಳ ಪ್ರತಿನಿಧಿಗಳು ಹೈಕೋರ್ಟ್ ಮೂಲಕ ಮತಚಲಾಯಿಸುವ ಹಕ್ಕು ಪಡೆದು ಭಾನುವಾರ ಮತಚಾಲಾಯಿಸಿದ್ದು. ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನೆಡೆಯಲಿದ್ದು, ನ್ಯಾಯಾಲಯದ ತೀರ್ಪಿನ ನಂತರ ಫಲಿತಾಂಶ ಪ್ರಕಟವಾಗಲಿದೆ.
‘ಎ‘ ತರಗತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತ-
ಅಪ್ಪಣ್ಣಪ್ಪ (7), ಕೆ ಎಂ ಅಂಬರೀಷ್(10), ಬಿ ಎಸ್ ಕೆಂಪೇಗೌಡ (9),ಎಂ ಗೋವಿಂದರಾಜು ( 13), ಎನ್ ಜಗನ್ನಾಥ್ ( 14), ಜೆ.ವೈ.ಮಲ್ಲಪ್ಪ( 7), ಎಂ ವೆಂಕಟೇಶ್(14), ಬಿ.ಎನ್ ಶ್ರೀನಿವಾಸ್ ಮೂರ್ತಿ(11), ಡಿ.ಸಿದ್ದರಾಮಯ್ಯ(15).
‘ಬಿ‘ ತರಗತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತ-
ಪುರುಷೋತ್ತಮ(2,602), ವಿಶ್ವಾಸ್ ಹನುಮಂತೇಗೌಡ (2,184),ಎಂ.ಆನಂದ(2338), ಎ.ರಾಮಾಂಜಿನಪ್ಪ(1876), ಲಕ್ಷ್ಮೀನಾಗೇಶ್(2,176), ಚಂದ್ರಕಲಾ ಮಂಜುನಾಥ್(1,872), ವಿ.ಎಸ್.ರಮೇಶ್(2,544), ಜಿ.ಕೆಂಪೇಗೌಡ (2,295).
ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗುವವರೆಗೂ ನೆಡೆಯಿತು ಮತ ಚಲಾವಣೆಗೆ ಸುಗಮವಾಗಲು 12 ಕೊಠಡಿಗಳಲ್ಲಿ ಮತ ಚಲಾವಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮತದಾನ ನಡೆದ ಸರ್ಕಾರಿ ಕಾಲೇಜಿನ ಸುತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೆಂಡಾಲ್‌ಗಳನ್ನು ಹಾಕಿಕೊಂಡು ಮತಯಾಚನೆ ನಡೆಸಿದ್ದು ವಿಶೇಷವಾಗಿತ್ತು.

