ಕನ್ನಡಿಗರ ಭೂಮಿ ವಲಸಿಗರಿಗೆ ಧಾರೆ ಎರೆಯಲು ಮುಂದಾದ ಡಿಕೆಶಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ತೆರಿಗೆ, ನಮ್ಮ ಹಕ್ಕುಎಂದು ಗಂಟಲು ಹರಿದುಕೊಳ್ಳುವ ಕರ್ನಾಟಕ  ಕಾಂಗ್ರೆಸ್ಸಿಗರೇ.. ನಿಮ್ಮ ಢೋಂಗಿತನಕ್ಕೆ ಏನೆನ್ನಬೇಕು? ಮತಕ್ಕೋಸ್ಕರ ಕನ್ನಡಿಗರ ಭೂಮಿಯನ್ನು ವಲಸಿಗರಿಗೆ ಧಾರೆ ಎರೆಯಲು ನಿಮ್ಮ ದೈನೇಸಿತನಕ್ಕೆ ಧಿಕ್ಕಾರ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡಿಗರ ಹಿತ ಕಾಪಾಡುವ ಬದಲು ಹೈಕಮಾಂಡ್‌ಗುಲಾಮಗಿರಿಗಾಗಿ ಪರಭಾಷಿಕರನ್ನು ಮತಕ್ಕಾಗಿ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದೀರಿ.

- Advertisement - 

ನಮ್ಮ ರಾಜ್ಯದ ಹೆಚ್ಚು ಪಾಲು ಬಿಹಾರಕ್ಕೆ ಹೋಗುತ್ತೆ, ಅಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಬಿಹಾರಿಗಳು ಕರ್ನಾಟಕಕ್ಕೆ ಬಂದು ಕನ್ನಡಿಗರ ಮಕ್ಕಳ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ‌ಎಂದು ಆರೋಪಿಸಿದ್ದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೇ ನಿಮ್ಮ ನಾಲಿಗೆಗಳು ಏಕೆ ಅಪಶೃತಿ ನುಡಿಯುತ್ತಿವೆ? ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ಪಕ್ಷವನ್ನು ಗೆಲ್ಲಿಸಲು ರಾಜ್ಯದಲ್ಲಿರುವ ಬಿಹಾರಿ ಮತದಾರರಿಗೆ ಬೆಂಗಳೂರಿನಲ್ಲಿ ನಿವೇಶನ, ಸೈಟು ಕೊಡುವುದಾಗಿ ಆಮಿಷ ಒಡ್ಡಿದ್ದೀರಿ? ಇದು ಎಷ್ಟು ಸರಿ? ಕಾಂಗ್ರೆಸ್‌ಓಲೈಕೆ ರಾಜಕಾರಣಕ್ಕೆ ಧಿಕ್ಕಾರ.

- Advertisement - 

ಕನ್ನಡಿಗರ ತೆರಿಗೆ ದುಡ್ಡು, ಕಾಂಗ್ರೆಸ್ಸಿನ ಜಾತ್ರೆ. ಯಾರದೋ ಜುಟ್ಟಿಗೆ ಮಲ್ಲಿಗೆ ಮುಡಿಸಲು ನಿಮಗೆ ನಾಚಿಕೆ ಸಂಕೋಚ ಆಗುವುದಿಲ್ಲವೇ? ಎಂದು ಜೆಡಿಎಸ್ ಹರಿಹಾಯ್ದಿದೆ.

 

Share This Article
error: Content is protected !!
";