ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಅಧಿಕಾರಿ ವರ್ಗದವರು ಪೌರಕಾರ್ಮಿಕರು ಸವಿ ನೆನಪು ಕಾರ್ಯಕ್ರಮ ನಡೆಯಿತು. ಒಂದು ರೀತಿಯಲ್ಲಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳಿಗೆ ಬೀಳ್ಕೊಡುಗೆ ಸಮಾರಂಭದ ನೆನಪಿಗಾಗಿ ಒಂದು ಗ್ರೂಪ್ ಪೋಟೋ ತೆಗೆಸಲಾಯಿತು. ನಮಸ್ತೆ ಹೋಗಿ ಬರುತ್ತೇವೆ ಎಂದು ಪರಸ್ಪರ ಬಿಗಿದಪ್ಪಿಕೊಂಡರು.
ನಗರ ಸಭೆಯ ಎಲ್ಲಾ ಸದಸ್ಯರು ನಮ್ಮ ಅವಧಿಯಲ್ಲಿ ನಗರದ ಸ್ವಚ್ಛತೆಗೆ ಮತ್ತು ಅಭಿವೃದ್ಧಿಗೆ ಕೈಜೋಡಿಸಿದ ಅಧಿಕಾರಿಗಳು ಮತ್ತು ಪೌರಕಾರ್ಮಿಕರಿಗೆ ನಗರಸಭೆ ಅಧ್ಯಕ್ಷರು ಸದಸ್ಯರು ಅಭಿನಂದನೆಗಳನ್ನು ತಿಳಿಸಿದರು.
ಎಲ್ಲಾ ಸದಸ್ಯರು ಅಧಿಕಾರಿಗಳ ಬಗ್ಗೆ ಪೌರಕಾರ್ಮಿಕರ ಬಗ್ಗೆ ಅಭಿರುಚಿಗಳನ್ನು ಹಂಚಿಕೊಂಡರು. ಪೌರಕಾರ್ಮಿಕರ ಸೇವೆ ಅತ್ಯಮೂಲ್ಯವಾದದ್ದು ಎಂದರು.
ಪೌರಕಾರ್ಮಿಕರಿಗೆ ನಗರದ ಜನತೆಯ ಸೇವೆ ಮಾಡಲು ಆ ದೇವರು ಹೆಚ್ಚು ಶಕ್ತಿ ನೀಡಲೆಂದು ಪೌರಕಾರ್ಮಿಕರ ಕುಟುಂಬಕ್ಕೆ ನಗರದ ಜನತೆಯ ಆಶೀರ್ವಾದ ಸದಾ ಇರಲಿ ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಟ್ಟು ಜನರ ಆರೋಗ್ಯವನ್ನು ಕಾಪಾಡುವಲ್ಲಿ ಅವರ ಸೇವೆ ಭಗವಂತನಿಗೆ ಸೇರಲಿ ಎಂದು ಎಲ್ಲಾ ಸದಸ್ಯರು ಪೌರಕಾರ್ಮಿಕರಿಗೆ ಹಾರೈಸಿದರು.
ಅಧಿಕಾರಿ ವರ್ಗದವರು ಸಹ ನಮ್ಮ ಅವಧಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸಹಕರಿಸಿದ್ದಾರೆ . ಜನರ ಸೇವೆಯಲ್ಲಿ ಹೆಚ್ಚು ಕೆಲಸ ಮಾಡುವ ಮೂಲಕ ಅಧಿಕಾರಿ ವರ್ಗದವರಿಗೂ ಹೆಚ್ಚು ಶಕ್ತಿ ನೀಡಲಿ ಎಂದು ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಸ್ಮರಿಸಿದರು.
ಪೌರಾಯುಕ್ತ ಎ ವಾಸೀಂ ರವರು ಕೂಡ ಸದಸ್ಯರ ಜೊತೆ ಸಹಕರಿಸಿದ್ದಕ್ಕೆ ನಗರದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಯಿತು. ಇದೇ ರೀತಿ ನಗರದ ಅಭಿವೃದ್ಧಿಯಾಗಲಿ ಎಂದು ಹೇಳಿದರು.
ಎಲ್ಲಾ ನಗರಸಭೆ ಸದಸ್ಯರು ನಮ್ಮ ಅವಧಿಯಲ್ಲಿ ಕೈಲಾದಷ್ಟು ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಿದ್ದೇವೆ ಎಂದರು.
ಅದೇ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ಸದಸ್ಯರಗಳನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತ ಎ.ವಾಸೀಂ, ವ್ಯವಸ್ಥಾಪಕಿ ಬಿ.ಆರ್.ಮಂಜುಳಾ, ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ, ವಿಠ್ಠಲ್, ಎಂ ಡಿ ಸಣ್ಣಪ್ಪ, ರತ್ನಮ್ಮ, ಸದಸ್ಯರಾದ ಮಹೇಶ್ ಪಲ್ಲವ, ಜಿಎಸ್ ತಿಪ್ಪೇಸ್ವಾಮಿ, ಶಿವರಂಜನಿ ಯಾದವ್, ಚಿತ್ರಜಿತ್ ಯಾದವ್, ಗುಂಡೇಶ್ ಕುಮಾರ್, ಜಬಿವುಲ್ಲಾ, ಶಂಶುನ್ನೀಸಾ, ಅನಿಲ್ ಕುಮಾರ್, ಕವಿತಾ, ಈ ಮಂಜುನಾಥ್, ವಿಶಾಲಾಕ್ಷಮ್ಮ, ಜಗದೀಶ್, ಗೀತಾ, ಸಮೀವುಲ್ಲಾ, ಬಿ ಎನ್ ಪ್ರಕಾಶ್, ವೈಪಿಡಿ ದಾದಾಪೀರ್,
ಗಣೇಶ್, ಅಜಯ್ ಕುಮಾರ್, ಸುರೇಖಾಮಣಿ, ಈರಲಿಂಗೇಗೌಡ, ಜಯವಾಣಿ, ಅಪೂರ್ವ, ಅಂಬಿಕಾ, ದೇವಿರಮ್ಮ, ನಾಮ ನಿರ್ದೇಶನ ಸದಸ್ಯರಾದ ರಮೇಶ್ ಬಾಬು, ಎಸ್ ಎಲ್ ಶಿವಕುಮಾರ್, ವಿ ಶಿವಕುಮಾರ್, ಗಿರೀಶ್ ಕುಮಾರ್, ಅಜೀಮ್ ಪಾಷಾ, ಆರೋಗ್ಯ ನಿರೀಕ್ಷಕರಾದ ಸುನೀಲ್, ಸಂಧ್ಯಾ, ಮಹಾಲಿಂಗಪ್ಪ, ಅಶೋಕ್, ರಮೇಶ, ನಗರ ಸಭೆ ಸಿಬ್ಬಂದಿ ವರ್ಗದವರು ಪೌರಕಾರ್ಮಿಕರು ಇದ್ದರು.
“ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ರವರು ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ನಗರದ ಅಭಿವೃದ್ಧಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಜಿಲ್ಲೆ ಉಸ್ತುವಾರಿ ಸಚಿವರು ಸಹಕಾರದಿಂದ ನಗರವನ್ನು ಇನ್ನಷ್ಟು ಅಭಿವೃದ್ಧಿಯಾಗಲಿದೆ. ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾಯಿ ಸಮಿತಿಯ ಅಧ್ಯಕ್ಷರು ಎಲ್ಲಾ ಸದಸ್ಯರಿಗೂ ನಮ್ಮ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗಿರಲಿ ಎಂದು ಅಭಿನಂದಿಸಿದರು”.
ಎ.ವಾಸೀಂ, ಪೌರಾಯುಕ್ತ, ನಗರಸಭೆ ಹಿರಿಯೂರು.

