ತಾಯಿ ಮತ್ತು ಮಗಳು ಕಣ್ಮರೆ : ಪತ್ತೆಗೆ ಮನವಿ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಚೇಳುಗುಡ್ಡ ನಿವಾಸಿಗಳಾದ ಸಬೀಯಾ ಬಾನು ಗಂಡ ಖಲೀಲ್ ಉಲ್ಲಾ, ಹಾಗೂ ಅಬೀದಾ ಬಾನು ಗಂಡ ಮೊಹಮ್ಮದ್ ಹನೀಫ್ ರವರು 2025 ಅಕ್ಟೋಬರ್ 30 ರಂದು ಕಾಣೆಯಾದ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸಬೀಯಾ ಬಾನು ಗೃಹಿಣಿಯಾಗಿದ್ದು, 5.9 ಅಡಿ ಎತ್ತರ, ದುಂಡು ಮುಖ, ಬಿಳಿ ಮೈಬಣ್ಣ, ದೃಡಕಾಯ ಶರೀರವನ್ನು ಹೊಂದಿದ್ದು. ಮನೆಯಿಂದ ಹೋಗುವಾಗ ಚೂಡಿದಾರ್ ಮೇಲೆ ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾರೆ.
ಅಬೀದಾ ಬಾನು ಸಹ ಗೃಹಿಣಿಯಾಗಿದ್ದು, ಸುಮಾರು 5.8 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ದೃಡಕಾಯ ಶರೀರವನ್ನು ಹೊಂದಿದ್ದು, ಮನೆಯಿಂದ ಹೊಗುವಾಗ ಸಿರೆಮೇಲೆ ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾರೆ.

ಕಾಣೆಯಾದವರ ಗುರುತು ಪತ್ತೆಯಾದವರು ಕೋಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-222933, 9480803145, ಪೊಲೀಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ 08194-222430, 9480803120, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194-222782 ಗೆ ಕರೆ ಮಾಡುವಂತೆ ಕೋರಲಾಗಿದೆ.

