ಅಂಗನವಾಡಿ ಕಾರ್ಯಕರ್ತರ ಅಪೂರ್ಣ ಅರ್ಜಿ ಭರ್ತಿಗೆ ಅವಕಾಶ

News Desk

ಅಂಗನವಾಡಿ ಕಾರ್ಯಕರ್ತರ ಅಪೂರ್ಣ ಅರ್ಜಿ ಭರ್ತಿಗೆ ಅವಕಾಶ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ 02 ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸಲ್ಲಿಸಿದ ಅರ್ಜಿಗಳ ಪೈಕಿ 202 ಹಾಗೂ 09 ಅಂಗನವಾಡಿ ಸಹಾಯಕಿಯರ ಹುದ್ದೆ ಸಲ್ಲಿಸಿದ ಅರ್ಜಿಗಳ ಪೈಕಿ 107 ಅರ್ಜಿಗಳು ಅಪೂರ್ಣವಾಗಿವೆ. ಇದೇ ಮಾದರಿಯಲ್ಲಿ ಭರಮಸಾಗರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ 07 ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸಲ್ಲಿಸಿದ ಅರ್ಜಿಗಳ ಪೈಕಿ 91 ಹಾಗೂ 23 ಅಂಗನವಾಡಿ ಸಹಾಯಕಿಯರ ಹುದ್ದೆ ಸಲ್ಲಿಸಿದ ಅರ್ಜಿಗಳ ಪೈಕಿ 25 ಅರ್ಜಿಗಳು ಅಪೂರ್ಣವಾಗಿವೆ.
ಈ ಹಿನ್ನಲೆಯಲ್ಲಿ ನ.13 ವರೆಗೆ ಈ ಅಪೂರ್ಣ ಅರ್ಜಿಗಳನ್ನು ವೆಬ್‍ಸೈಟ್  https://karnemakaone.kar.nic.in/abcd/     ನಲ್ಲಿ ಪೂರ್ಣಗೊಳಿಸಲು ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.  
ಅಭ್ಯರ್ಥಿಗಳು ಮೊದಲನೇ ಹಂತದಲ್ಲಿ ಅರ್ಜಿ ಮಾಹಿತಿ ತುಂಬಬೇಕು. ಎರಡನೇ ಹಂತದಲ್ಲಿ ಭಾವಚಿತ್ರ ಹಾಗೂ ಸಹಿ ಅಪ್‍ಲೋಡ್ ಮಾಡಬೇಕು. ಮೂರನೇ ಹಂತದಲ್ಲಿ ದಾಖಲಾತಿಗಳನ್ನು ಅಪ್‍ಲೋಡ್ ಮಾಡಬೇಕು. ನಾಲ್ಕನೇ ಹಂತದಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಇ-ಹಸ್ತಾಕ್ಷರೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಬೇಕು.
ಆ.4 ರಂದು ಹೊರಡಿಸಿದ ಅಧಿಸೂಚನೆ ಕೊನೆಯ ದಿನಾಂಕಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮಾತ್ರ ಆಯ್ಕೆ ಸಂದರ್ಭದಲ್ಲಿ ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.  

- Advertisement - 
Share This Article
error: Content is protected !!
";