ಖಜಾನೆ ಉಪನಿರ್ದೇಶಕರಾಗಿ ಹೆಚ್.ಟಿ.ಅಶೋಕ ಅಧಿಕಾರ ಸ್ವೀಕಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಖಜಾನೆ ಉಪನಿರ್ದೇಶಕರಾಗಿ ಹೆಚ್.ಟಿ.ಅಶೋಕ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಖಜಾನೆ ಉಪನಿರ್ದೇಶಕರ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದ ಸಹಾಯಕ ನಿರ್ದೇಶಕ ಎನ್.ಬೋರಯ್ಯ ಅವರು ಹೆಚ್.ಟಿ.ಅಶೋಕ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಖಜಾನೆಯ ಇಲಾಖೆಯ ಮುಖ್ಯಲೆಕ್ಕಿಗರಾದ ಅಶೋಕ್ ತುಂಬಿನಕಟ್ಟಿ, ಗಂಗಾಧರ್, ಪ್ರಭುಕುಮಾರ್, ನರಸಿಂಹಮೂರ್ತಿ, ಪ್ರಥಮ ದರ್ಜೆ ಸಹಾಯಕ ಅಶೋಕ್ ಸೇರಿದಂತೆ ಸಿಬ್ಬಂದಿಗಳು ಇದ್ದರು.

- Advertisement - 

 

- Advertisement - 
Share This Article
error: Content is protected !!
";