ಚಂದ್ರವಳ್ಳಿ ನ್ಯೂಸ್, ಯಾದಗಿರಿ:
“ಸರ್ಕಾರ ಕೇಳು, ಕಬ್ಬಿನ ಕಹಿ ಮಾತು!”
ಸರ್ಕಾರ ಕೇಳು!
ಕಬ್ಬು ಕಡಿಯುವ ರೈತನ ಕೈ ಕಡಿಯಬೇಡ,
ಅವನ ಬೆವರು ನಾಡಿನ ಸಿಹಿಯ ಬೀಜ ಬೇಡ!
ನಿನ್ನ ಕಚೇರಿಯ ಚಹಾದಲ್ಲಿ ಸಕ್ಕರೆ ಇದೆ,
ಆದರೆ ಆ ಸಕ್ಕರೆಯ ಹಿಂದೆ-ರೈತನ ಕಣ್ಣೀರು ಮುದ್ದಿದೆ!
ಬೆಲೆಗೆ ಮಾತು ಕೊಟ್ಟೆ, ಆದರೆ ಜಾರಿಬಿಟ್ಟೆ,
ನಂಬಿಕೆಯ ಮೇಲೆ ನಿಂತವನ ಮನ ಮುರಿದಿಟ್ಟೆ!
ಮೆಜಿನ ಮೇಲೆ ಅಂಕೆಗಳು ನಿನಗಿರಬಹುದು,
ಆದರೆ ಹೊಲದ ಮೇಲೆ ಆತ್ಮಗಳಿವೆ-ಅದೇ ನಮ್ಮ ರೈತರು!
ಸಲ್ಲು ಬೆಲೆಯಲ್ಲ, ಸತ್ಯದ ಬೆಲೆ ಕೊಡು,
ಹೋರಾಟದ ಬದಲು ಗೌರವದ ಬೆಳಕು ಕೊಡು!
ರೈತನ ಕಣ್ಣೀರು ನದಿಯಂತೆ ಹರಿಯದಿರಲಿ,
ಆ ನದಿಯಲ್ಲಿ ನಿನ್ನ ಸರ್ಕಾರ ಮುಳುಗದಿರಲಿ!
ಸಕ್ಕರೆ ಸಿಹಿ ಆಗಲಿ,
ಆದರೆ ನ್ಯಾಯವೇ ಅದರ ನಿಜವಾದ ಸಿಹಿ ಆಗಲಿ!
ಕವಿತೆ- ಚಂದನ್ ಅವಂಟಿ, ಇಡ್ಲೂರ್, ಯಾದಗಿರಿ.

