ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ಗೆ ಮತ ಕೊಟ್ಟಿದ್ದು ಹಗಲು ದರೋಡೆ, ಲೂಟಿ ಮಾಡಲು ಅಲ್ಲ. ನಾಡಿನ ಜನರ ಕಷ್ಟವನ್ನು ಪರಿಹರಿಸುವ ಕೆಲಸ ಮಾಡಲಿ ಎಂದು ಕೇಂದ್ರ ಬೃಹತ್‌ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಅಸೆಡ್ಡೆ ತೋರುತ್ತಿದ್ದು, ಸಿದ್ದರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.
ಕೇಂದ್ರ ಬೃಹತ್‌ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರುದೇಶಕ್ಕೆ ಅನ್ನ ಕೊಡುವ ರೈತರನ್ನು ಅಪಮಾನಿಸಿದ ಕರ್ನಾಟಕ ಕಾಂಗ್ರೆಸ್ ಪಕ್ಷದ ಶಾಸಕ ಯಶವಂತರಾಯಗೌಡ ಪಾಟೀಲರೇ ನಿಮಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ಟೀಕಿಸಿದೆ.
ಇಂಡಿ ಕ್ಷೇತ್ರದ ಶಾಸಕರೇ ನಿವೇನು ಬ್ರಹ್ಮಜ್ಞಾನಿಯೇ ? ಧರಣಿ ನಿರತ ರೈತರು ಯಾರು ? ಯಾರು ರೈತರಲ್ಲ ಎಂದು ಸರ್ಟಿಫಿಕೇಟ್‌ಕೊಡಲು.
ನಿಮ್ಮ ಈ ಗೊಡ್ಡು ಬೆದರಿಕೆಯ, ಉದ್ಧಟತನದ ಮಾತುಗಳನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಕೂಡಲೇ ರಾಜ್ಯದ ರೈತರ ಕ್ಷಮೆ ಕೇಳಿ ಎಂದು ಜೆಡಿಎಸ್ ಆಗ್ರಹಿಸಿದೆ.
ರೈತರೇ ದೇಶದ ಬೆನ್ನೆಲುಬು. ಅಂತಹ ರೈತರು ತಾವು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ಕೊಡಿ ಎಂದು 10 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಅವರೇ ಅನ್ನದಾತರ ತಾಳ್ಮೆ ಪರೀಕ್ಷಿಸಬೇಡಿ ಎಂದು ಜೆಡಿಎಸ್ ಎಚ್ಚರಿಸಿದೆ.

