ಹುಣಸೆಹಣ್ಣು ಉದ್ಯಮಶೀಲತಾ ಕಾರ್ಯಾಗಾರ: ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:                                                                                                           ಡಾ. ಎಂ.ಎಚ್. ಮರಿಗೌಡ ಪ್ರತಿಷ್ಠಾನ ಮತ್ತು KCTU ಸಹಯೋಗದಲ್ಲಿ ಆಯೋಜಿಸಿರುವ ನಿಮ್ಮ ಉದ್ಯಮದ ಬೆಳವಣಿಗೆಗೆ ನಿರ್ಣಾಯಕವಾದ 2 ದಿನಗಳ ಹುಣಸೆಹಣ್ಣು ಸಂಸ್ಕರಣೆ ಮತ್ತು ಉದ್ಯಮಶೀಲತಾ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು ಆಸಕ್ತರು ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಸಂಘಟಕರು ಮನವಿ ಮಾಡಿದ್ದಾರೆ.

ನವೆಂಬರ್ 12 ಮತ್ತು 13 ರಂದು ಬೆಳಿಗ್ಗೆ 9 ಗಂಟೆಯಿಂದ ಬೆಂಗಳೂರಿನ ಹೆಬ್ಬಾಳ ಯುಎಎಸ್ ಹಳೆ ವಿದ್ಯಾರ್ಥಿಗಳ ಸಂಘದಲ್ಲಿ ಆಯೋಜಿಸಲಾಗಿದೆ.

- Advertisement - 

2ನೇ ದಿನದ ಕಾರ್ಯಕ್ರಮದಲ್ಲಿ ಕ್ಷೇತ್ರ ಭೇಟಿ ಮತ್ತು ಪ್ರಾಯೋಗಿಕ ತರಬೇತಿ. ಗಣ್ಯರ ಮಾರ್ಗದರ್ಶನ: ಶಾಸಕ ಟಿ.ಬಿ. ಜಯಚಂದ್ರ ಮತ್ತು ಕೈಗಾರಿಕಾ ಇಲಾಖೆಯ ನಿರ್ದೇಶಕ ಡಾ. ಬಿ.ಸಿ. ಸತೀಶ ಅವರಿಂದ ಬೆಂಬಲ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

ಹಣಕಾಸು ನೆರವು : PMFME ಯೋಜನೆಯಡಿಯಲ್ಲಿ ಲಭ್ಯವಿರುವ ಸಬ್ಸಿಡಿ ಮತ್ತು ಕ್ಲಸ್ಟರ್ (MSE-CDP) ರಚನೆಯ ಬಗ್ಗೆ ಸಂಪೂರ್ಣ ಮಾಹಿತಿ.

- Advertisement - 

ತಾಂತ್ರಿಕ ತರಬೇತಿ : ವಿಜ್ಞಾನಿಗಳು ಮತ್ತು ಯಂತ್ರ ತಯಾರಕರಿಂದ ನೇರ ಸಂಸ್ಕರಣೆ ಮತ್ತು ಗುಣಮಟ್ಟದ ನಿಯಂತ್ರಣ ತರಬೇತಿ.
ಒಕ್ಕೂಟ ರಚನೆ: ದೀರ್ಘಕಾಲೀನ ಮಾರುಕಟ್ಟೆ ಸ್ಥಿರತೆಗಾಗಿ ಹುಣಸೆ ಉದ್ಯಮಿಗಳ ಫೆಡರೇಶನ್ ರಚನೆ ಕುರಿತು ಚರ್ಚೆ.

ವ್ಯವಸ್ಥೆಗಳು: ನಿಮ್ಮ ಅನುಕೂಲಕ್ಕಾಗಿ ಕಾರ್ಯಾಗಾರದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ದಯವಿಟ್ಟು ತಕ್ಷಣ ಆಸಕ್ತರು ಭಾಗವಹಿಸುವಿಕೆಯನ್ನು ಖಚಿತಪಡಿಸಲು ಕೋರಿದ್ದಾರೆ.

Share This Article
error: Content is protected !!
";