ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಎನ್ ಹನುಮಂತೇಗೌಡ ರವರ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಟಿಎಪಿಎಂಸಿಎಸ್ ನಿರ್ದೇಶಕರು ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿ ವಿಶ್ವಾಸ್ ಹನುಮಂತೇಗೌಡ ಮಾತನಾಡಿ ಹನುಮಂತೇಗೌಡ ರವರು ಬಡವರ ದೀನ ದಲಿತರ ಪರವಾಗಿದ್ದರು ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೊಣ ಎಂದರು.
ಪ್ರಾಂಶುಪಾಲ ಎಂ. ಸಿ. ಮಂಜುನಾಥ್ ಮಾತನಾಡಿ ಲಾವಣ್ಯ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯಿಂದ ಬಿಎಡ್ ತರಗತಿಯವರೆಗೆ ಪ್ರಾರಂಭ ಮಾಡಿ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಹನುಮಂತೇಗೌಡ ರವರು ಮಹತ್ತರ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಜಾತಿಯತೆ ತೊಲಗಲಿ –
ದೊಡ್ಡಬಳ್ಳಾಪುರ:ಲಾವಣ್ಯ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ದಾಸ ಶ್ರೇಷ್ಠ ಕನಕದಾಸರ 538 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು ನಂತರ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಟಿಎಪಿಎಂಸಿಎಸ್ ನ ನಿರ್ದೇಶಕರಾದ ವಿಶ್ವಾಸ್ ಹನುಮಂತೇಗೌಡ ರವರು ಸಮಾಜದಲ್ಲಿ ಜಾತಿಯತೆ ತೊಲಗಲಿ ಸಮಸಮಾಜ ನಿರ್ಮಾಣವಾಗಲಿ ಸಮಾನತೆ ಮೂಡಲಿ ಹಾಗಾದಾಗ ಮಾತ್ರ ಕನಕದಾಸರ ಆಶೆಯ ಈ ಡೆರಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ ಸಿ ಮಂಜುನಾಥ್, ಉಪನ್ಯಾಸಕರಾದ ಕಾರ್ತಿಕ್, ಮಹಾದೇವ್, ಎನ್ ರಶ್ಮಿ, ಅನುಷಾ, ಆರ್ ಎಲ್ ಅನು, ಮೀನಾ, ಆಶಾ, ಹರ್ಷಿತಾ, ಗಂಗಮೂರ್ತಿ, ಗುರುಪ್ರಸಾದ್, ವಿದ್ಯಾ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ ಜಿ. ಕೃಷ್ಣಮೂರ್ತಿ ಮಾತನಾಡಿದರು.
ಈ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕ ಕಾರ್ತಿಕ್ ಮಹಾದೇವ್ ಎನ್ ರಶ್ಮಿ ಅನುಷಾ ಹರ್ಷಿತಾ ಆಶಾ ಗುರುಪ್ರಸಾದ್ ಗಂಗಮೂರ್ತಿ ರಾಕೇಶ್ ಪರಿಮಳ ಅನು ಸತೀಶ್ ಎಲ್ಲಾ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

