ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಗೆ ಮೇಲ್ಚಾವಣಿ ನಿರ್ಮಿಸಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ತಾಲೂಕಿನ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿ ನಿರ್ಮಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿ ವಿಲಾಸರ ಅವರುಗಳ ಪ್ರತಿಮೆಗಳಿಗೆ ಮೇಲ್ಚಾವಣಿ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ತಾಲೂಕಿನ ಜನರ ನೀರಿನ ಸಮಸ್ಯೆಯನ್ನು ಮನಗಂಡು ಮೈಸೂರು ಅರಸರು ಹಿರಿಯೂರು ಬಳಿ 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ವಾಣಿ ವಿಲಾಸ ಜಲಾಶಯವನ್ನು 1907ರಲ್ಲಿ ನಿರ್ಮಾಣ ಮಾಡಿದ್ದರು.

- Advertisement - 

ಕರ್ನಾಟಕದ ಪ್ರಾಚೀನ ನೀರಾವರಿ ಯೋಜನೆಗಳಲ್ಲಿ ಒಂದಾದ ವಿವಿ ಸಾಗರ ಜಲಾಶಯವು ಚಿತ್ರದುರ್ಗ ಜಿಲ್ಲೆಯ ಸಾವಿರಾರು ಎಕರೆ ಕೃಷಿ ಭೂಮಿಗೆ ಆಧಾರವಾಗಿದೆ.

ಹಿಂದಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಆಡಳಿತದ ಅವಧಿಯಲ್ಲಿ ಮೈಸೂರು ಅರಸರ ನೆನಪಿಗಾಗಿ ಜಲಾಶಯದ ಕೆಳಭಾಗದಲ್ಲಿ ಅರಸರ ಮತ್ತು ಅವರ ತಾಯಿಯ ಕಂಚಿನ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು.

- Advertisement - 

ಬಿಸಿಲು ಮತ್ತು ಮಳೆಗೆ ಪ್ರತಿಮೆಗಳು ಸಿಲುಕದಂತೆ ಕೂಡಲೇ ಮೇಲ್ಚಾವಣಿ ನಿರ್ಮಿಸುವಂತೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ಬರೆದು ಮನವಿ ಮಾಡಿದ್ದಾರೆ.

 

 

 

 

Share This Article
error: Content is protected !!
";