ಮಕ್ಕಳು ಹಠ ಮಾಡುವುದು ಪ್ರಕೃತಿದತ್ತವಾಗಿ ಬಂದ ಸ್ವಭಾವ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಠ ಮಾಡುವುದು ಮಕ್ಕಳಿಗೆ ಬಂದ ಪ್ರಕೃತಿದತ್ತ ಸ್ವಭಾವ. ಅಂತಹ ಮಕ್ಕಳನ್ನು ರಮಿಸುವುದು ಒಂದು ಕಲೆ ಎಂದು ಬೆಂಗಳೂರಿನ ಮನೋವೈದ್ಯ, ಪದ್ಮಶ್ರೀ ಪುರಸ್ಕೃತ ಡಾ.ಸಿ ಆರ್ ಚಂದ್ರಶೇಖರ್‌ ಹೇಳಿದರು.

ರೋಟರಿ ಹಿರಿಯೂರು, ಭಾರತೀಯ ರೆಡ್ ಕ್ರಾಸ್ ಹಿರಿಯೂರು, ಶ್ರೀ ಮೋಕ್ಷ ಗುಂಡಂ ವಿಶ್ವೇಶ್ವರಯ್ಯ ವಿದ್ಯಾ ಮಂದಿರ ಹಾಗೂ ವಾಗ್ದೇವಿ ವಿದ್ಯಾ ಸಂಸ್ಥೆ ಹಿರಿಯೂರು ಇವರ ವತಿಯಿಂದ ಮನೋಶಾಸ್ತ್ರಜ್ಞ ಡಾ.ಸಿ ಆರ್ ಚಂದ್ರಶೇಖರ್ ಇವರಿಂದ ಪೋಷಕರಿಗೆ ಮಕ್ಕಳ ಮನಸ್ಸನ್ನು ಅರಿಯುವ ಬಗ್ಗೆ ಪೋಷಕರೊಂದಿಗೆ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಹಠಮಾರಿತನ ತಗ್ಗಿಸುವ ಕಲೆ ಕಲಿತುಕೊಂಡರೆ ಮಕ್ಕಳನ್ನು ಮಾನಸಿಕ ಒತ್ತಡದಿಂದ ಪಾರು ಮಾಡಬಹುದು ಎಂದು ಅವರು ಹೇಳಿದರು.

- Advertisement - 

ಮುಂದುವರೆದು ಮಾತನಾಡಿದ ಡಾ.ಸಿ ಆರ್ ಚಂದ್ರಶೇಖರ್‌, ಸಮಾಜದ ಬೆಳವಣಿಗೆಯಲ್ಲಿ ಪ್ರಭಾವ ಬೀರುವ ಅಂಶಗಳಾದ ಅನುವಂಶೀಯತೆ, ತಂದೆ ತಾಯಿ ಪಾಲನೆ, ಮೆದುಳು ಹಾನಿ, ಶಾಲಾ ವಿದ್ಯಾಭ್ಯಾಸ, ಮಾಧ್ಯಮಗಳು ಮುಂತಾದ ವಿಷಯಗಳ ಕುರಿತು ಪೋಷಕರಿಗೆ ತಿಳುವಳಿಕೆ ನೀಡಿದರು.

ಮಕ್ಕಳ ಹಿತದೃಷ್ಠಿಯಿಂದ ಗ್ರಹಿಸುವಿಕೆ, ಪರೀಕ್ಷೆ ಭಯ, ಸ್ಮರಣೆ, ಸಂಗೀತ, ನೃತ್ಯ ಎಲ್ಲಾ ಅಂಶಗಳನ್ನು ಅಳವಡಿಸಿಕೊಳ್ಳಿ ಎಂದು ತಿಳಿ ಹೇಳಿದರು.

- Advertisement - 

ಮಕ್ಕಳು ಕುಟುಂಬದ- ಸಮಾಜದ ಆಶಾಕಿರಣಗಳು. ಅವರು ವಿದ್ಯಾವಂತರಾಗಲಿ, ಬುದ್ಧಿವಂತರಾಗಲಿ, ಪ್ರತಿಭಾವಂತರಾಗಲಿ, ಚೆನ್ನಾಗಿ ಬದುಕಿ ಬಾಳಲಿ, ಕೀರ್ತಿ ತರಲಿ, ಎಂದು ಎಲ್ಲಾ ತಂದೆ ತಾಯಿಗಳು ಬಯಸುತ್ತಾರೆ. ಆದರೆ ಎಲ್ಲ ಮಕ್ಕಳ ವಿಕಾಸ ಒಂದೇ ಮಟ್ಟದಲ್ಲಿರುವುದಿಲ್ಲ ಎಂದು ಹೇಳಿದರು.

ಕೆಲ ಮಕ್ಕಳು ಶಾಲಾ ಕಾಲೇಜಿನಲ್ಲಿ ಟಾಪರ್ ಗಳಾದರೆ ಕೆಲವರು ಫೇಲ್ ಆಗುತ್ತಾರೆ, ಕೆಲವರು ವ್ಯವಹಾರಿಕ ಜಾಣರಾದರೆ, ಕೆಲವರು ದಡ್ಡರಾಗಿರುತ್ತಾರೆ. ಕೆಲವರು ನೀತಿವಂತರಾದರೆ, ಕೆಲವರು ಅಡ್ಡ ಮಾರ್ಗಗಳಾಗಿ ದುಶ್ಚಟಗಳಿಗೆ ದಾಸರಾಗುತ್ತಾರೆ. ಕೆಲವರು ಸಮಾಜಮುಖಿಗಳಾದರೆ, ಕೆಲವರು ಸಮಾಜ ವಿರೋಧಿಗಳಾಗುತ್ತಾರೆ. ಏಕೆ ಹೀಗೆ? ಎನ್ನುವ ಸೂಕ್ಷ್ಮ ವಿಚಾರಗಳನ್ನು ಪೋಷಕರು ಅರಿಯಬೇಕು ಎಂದು ಹೇಳಿದರು.

ಮಕ್ಕಳದು ಪಂಚಮುಖಿ ಬೆಳವಣಿಗೆ. ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಯನ್ನು ನಿರ್ದೇಶಿಸಿ ನಿಯಂತ್ರಿಸುವ ಅಂಶಗಳು ಹಲವಾರು ಇದ್ದು ಇವುಗಳನ್ನು ಪೋಷಕರು ಅರಿತು ಮಕ್ಕಳ ಮನಸ್ಥಿತಿಗೆ ತಕ್ಕಂತೆ ವ್ಯವಸ್ಥೆ ಮಾಡಬೇಕು ಎಂದು ಮನವೈದ್ಯರು ಹೇಳಿದರು.

ಹಿರಿಯೂರು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎ. ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಕಾರ್ಯದರ್ಶಿ ವಿಕಾಸ್ ಜೈನ್
, ಎಸ್ಎಂವಿವಿಎಂ ಕಾರ್ಯದರ್ಶಿ ಹೆಚ್ ಎಂ ಬಸವರಾಜ್, ನಿರ್ದೇಶಕ ರವಿಪ್ರಸಾದ್, ಮುಖ್ಯ ಶಿಕ್ಷಕ ಜಿ. ತಿಪ್ಪೇಸ್ವಾಮಿ, ಪೋಷಕರು ಹಾಗೂ ಶಿಕ್ಷಕ ಶಿಕ್ಷಕಿಯರು ಹಾಜರಿದ್ದರು.

 

Share This Article
error: Content is protected !!
";