ಘಾಟಿ ದನಗಳ ಜಾತ್ರಾ ಪೂರ್ವ ಸಿದ್ದತಾ ಸಭೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಕ್ಷಿಣ ಭಾರತದ ಸುಪ್ರಸಿದ್ದ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ
  ದೇವಾಲಯ  ವತಿಯಿಂದ  ದನಗಳ ಜಾತ್ರೆಯ ಪೂರ್ವ ಸಿದ್ದತೆಗೆ ಸಭೆ ನಡೆಸಲಾಯಿತು. 

ಸಭೆಯಲ್ಲಿ ಘಾಟಿ ಸುಬ್ರಹ್ಮಣ್ಯದಲ್ಲಿ ಪ್ರತಿ ವರ್ಷ ದನಗಳ ಜಾತ್ರೆ ನಡೆಯುತ್ತದೆ. ಇದು ರಾಸುಗಳ ವ್ಯಾಪಾರ ಮತ್ತು ವಹಿವಾಟಿಗೆ ಪ್ರಸಿದ್ಧವಾಗಿದೆ. ಈ ಜಾತ್ರೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಿಂದಲೂ ರೈತರು ಭಾಗವಹಿಸುತ್ತಾರೆ. ಇಲ್ಲಿನ ವಿವಿಧ ತಳಿಗಳ ಎತ್ತುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಬರುತ್ತಾರೆ. ಈ ಜಾತ್ರೆಗೆ ರೈತರು ತಮ್ಮ ರಾಸುಗಳನ್ನು ಮೆರವಣಿಗೆಯೊಂದಿಗೆ ಕರೆತರುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.

- Advertisement - 

ಘಾಟಿ ಸುಬ್ರಹ್ಮಣ್ಯ ದೇವಾಲಯದ ಸನ್ನಿಧಿಯಲ್ಲಿ ನಡೆಯುವ ಜಾತ್ರೆ ಯಲ್ಲಿ ನಮ್ಮ ರಾಜ್ಯ  ಹಾಗೂ ಅಂತರ್ ರಾಜ್ಯದ ವ್ಯಾಪಾರಗಾರರಿಗೆ  ದನಗಳನ್ನು ಸಾಕಾಣಿಕೆ ಸುಂಕ   ದೇವಾಲಯದ ಅಭಿವೃದ್ದಿ ಪ್ರಾಧಿಕಾರದಿಂದ ವಾಹನ ಸುಂಕ ವಿನಾಯಿತಿ  ನೀಡಲಾಗಿತ್ತು.

ಅದೆ ರೀತಿ  ದೇವಾಲಯದ ಅಭಿವೃದ್ದಿ ಪ್ರಾಧಿಕಾರದಿಂದ  ಈ ಬಾರಿಯು ವಿನಾಯಿತಿ ನೀಡಿದರೆ ಸಾಕಾಣಿಕಾರರು ಹಾಗೂ ರಾಸು ವ್ಯಾಪಾರಸ್ಥರು ಬಹಳ ಉಪಯೋಗ ಪಡೆದುಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

- Advertisement - 

ರೈತರಿಗೆ ಹಾಗು ವ್ಯಾಪಾರಸ್ಥರಿಗೆ  ವ್ಯವಸ್ಥೆ ಕಲ್ಪಿ‌ಸುವ ವಿಷಯಗಳು-
1 ಘಾಟಿ ಸುಬ್ರಹ್ಮಣ್ಯ ಅಂತರ್ ರಾಜ್ಯ ಭಾರಿ ದನಗಳ ಜಾತ್ರೆಗೆ ದನಗಳನ್ನು ಸಾಗಿಸುವ ವಾಹನಗಳಿಗೆ ವಾಹನ ಸುಂಕ ವಿನಾಯಿತಿ, ಕಾಂಪೌಂಡ್ ತೆರೆಯುವ ಬಗ್ಗೆ

3 . ರೈತರಿಗೆ ವಿಶ್ರಾಂತಿ ಕೊಠಡಿಗಳು
4 . ರಾತ್ರಿ ಸಮಯದಲ್ಲಿ ರೈತರಿಗೆ ಊಟ ವ್ಯವಸ್ಥೆ.. ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ   ರೈತ ಸಂಘದ  ಜಿಲ್ಲಾಧ್ಯಕ್ಷರು ಪ್ರಸನ್ನ ಕುಮಾರ್, ತಾಲೂಕು ಅಧ್ಯಕ್ಷರು ಹನುಮೇಗೌಡ, ತಾಲೂಕು ಕಾರ್ಯದರ್ಶಿ ಸತೀಶ್, ಮುನಿ ರಾಮೇಗೌಡ, ವಾಸುದೇವ್ಮೂರ್ತಿ, ಮುರಳಿ, ಹನುಮಂತರಾಯಪ್ಪಹಳ್ಳಿ ರೈತ ಅಂಬರೀಶ್ತಿಪ್ಪೂರು ತಿಮ್ಮಣ್ಣಇನ್ನು ಅನೇಕ ರೈತ ಮುಖಂಡರುಸಭೆಯಲ್ಲಿ  ಭಾಗವಹಿಸಿದ್ದರು.

 

Share This Article
error: Content is protected !!
";