ಯಡಿಯೂರಪ್ಪಗೆ ಪೋಕ್ಸೋ ಕೇಸ್​ ವಿಚಾರವಾಗಿ ಹಿನ್ನೆಡೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಗೆ ಪೋಕ್ಸೋ ಕೇಸ್​ ವಿಚಾರವಾಗಿ ಹಿನ್ನೆಡೆಯಾಗಿದೆ.
ತ್ವರಿತ ನ್ಯಾಯಾಲಯದ ಸಮನ್ಸ್​ ರದ್ದುಪಡಿಸಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದ್ದು
, ಈ ಬಗ್ಗೆ ನ್ಯಾ.ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಅಗತ್ಯವಿಲ್ಲದಿದ್ದಾಗ ಖುದ್ದು ಹಾಜರಿಯಿಂದ ವಿನಾಯಿತಿಗೆ ಬಿಎಸ್​ವೈ ಖುದ್ದು ಅರ್ಜಿ ಸಲ್ಲಿಸಬಹುದು ಎಂದಿರುವ ಕೋರ್ಟ್​ ಅಂತಹ ಮನವಿ ಪರಿಗಣಿಸಲು ತ್ವರಿತ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ಯಡಿಯೂರಪ್ಪ ವಿರುದ್ಧ ಫೆಬ್ರವರಿ 28ರಂದು ತ್ವರಿತ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು.

- Advertisement - 

 

- Advertisement - 
Share This Article
error: Content is protected !!
";