ಚಿತ್ತಾಪುರದಲ್ಲಿ ಆರ್​​ಎಸ್​ಎಸ್ ಪಥಸಂಚಲನಕ್ಕೆ ಹೈಕೋರ್ಟ್‌ ಅನುಮತಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​​ಎಸ್​ಎಸ್)ಕ್ಕೆ
100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್‌-16ರ ಸೋಮವಾರದಂದು ಆಯೋಜಿಸಲಾಗಿದ್ದ ಪಥಸಂಚಲನಕ್ಕೆ ಹೈಕೋರ್ಟ್‌ ಅನುಮತಿ ನೀಡಿ ಆದೇಶಿಸಿದೆ.

ಇದೇ ಸಂದರ್ಭದಲ್ಲಿ ನ್ಯಾಯಪೀಠವು, 300 ಮಂದಿ ಆರ್‌ಎಸ್‌ಎಸ್‌ ಸದಸ್ಯರು ಮತ್ತು 50 ಮಂದಿ ವಾದ್ಯಗಾರರೊಂದಿಗೆ ಪಥಸಂಚಲನ ನಡೆಸುವುದಕ್ಕೆ ಅನುಮತಿ ನೀಡುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

- Advertisement - 

ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ, ಆರ್​ಎಸ್ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಕಲಬುರಗಿಯ ನ್ಯಾಯಪೀಠ, ಪಥಸಂಚಲನಕ್ಕೆ ತಹಶೀಲ್ದಾರ್​ ಅವರು ನೀಡಿರುವ ಅನುಮತಿಯನ್ನು ಪರಿಗಣಿಸಿ, ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಆದೇಶದಲ್ಲಿ ಏನಿದೆ?
2025ರ ಅಕ್ಟೋಬರ್ 18ರಂದು ರಾಜ್ಯ ಸರ್ಕಾರವು, ಉದ್ಯಾನ, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಹೆಚ್ಚು ಮಂದಿ ಶಾತಿಯುತ ನಾಗರಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸರ್ಕಾರದ ಅನುಮತಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಸಂವಿಧಾನದಲ್ಲಿ ಲಭ್ಯವಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಭೆಯನ್ನು ನಡೆಸುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಎಂದು ತಿಳಿಸಿ, ಆದೇಶಕ್ಕೆ ತಡೆ ನೀಡಿದೆ. ಈ ತಡೆಯಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಸಲ್ಲಿಸಿದ್ದ ಮೇಲ್ಮನವಿಯನ್ನೂ ದ್ವಿಸದಸ್ಯಪೀಠ ವಜಾಗೊಳಿಸಿ ಆದೇಶಿಸಿರುವ ಅಂಶವನ್ನು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

- Advertisement - 

ವಕೀಲರ ವಾದ:
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ
, ಅರ್ಜಿದಾರರ ಪರ ವಕೀಲರು, ”ಪಥಸಂಚಲನದಲ್ಲಿ 300 ಮಂದಿ ಮತ್ತು ವಾದ್ಯಗೋಷ್ಠಿಯಲ್ಲಿ 25 ಮಂದಿಗೆ ಸೀಮಿತಗೊಳಿಸಲಾಗಿದೆ. ಆದ್ದರಿಂದ ಪಥಸಂಚಲನಕ್ಕೆ 600 ಮಂದಿ ಮತ್ತು ವಾದ್ಯಗೋಷ್ಠಿಯಲ್ಲಿ 50 ಮಂದಿಗೆ ಅವಕಾಶ ನೀಡಬೇಕು. ಅಲ್ಲದೆ, ಸಂಘ 100 ವರ್ಷ ಪೂರೈಸಿರುವ ವಿಶೇಷ ಸಂದರ್ಭದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿದೆ. ಜನರ ಭಾವನೆಗಳನ್ನು ಪರಿಗಣಿಸಿ, ಒಂದು ಅವಧಿಗಾಗಿ ಈ ಮನವಿ ಮಾಡಲಾಗುತ್ತಿದ್ದೇವೆಎಂದು ಕೋರಿದರು.

 

 

 

Share This Article
error: Content is protected !!
";