ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಟೆಲಿವಿಷನ್ ಕಲ್ಚರ್ ಸ್ಪೋರ್ಟ್ ಕ್ಲಬ್ ಉತ್ತರಳ್ಳಿ ಬೆಂಗಳೂರು ಇಲ್ಲಿ ಅಕ್ಷರನಾದ ಪಬ್ಲಿಕೇಷನ್ಸ್ ಅವರ ಆರನೇ ಆವೃತ್ತಿಯ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಈ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಎನ್ ಬಂಡೇಹಳ್ಳಿ, ಇವರ ‘ಕಡೆದಷ್ಟು ಕನಸುಗಳು‘, ಸದಸ್ಯರಾದ ಶಾಂತಮ್ಮ ಅವರ ‘ಭಾವಯಾನ‘ ಗಿರೀಶ್ ಅವರ ‘ರಾಗಿಯೋ ಕ್ರೂರಿಯೋ ‘ಶಶಿಕಲಾ ಕುಂಚಿಗನಾಳ್ ಅವರ ‘ಭಾವಸಂಗಮ‘ ಕೃತಿಗಳು ಲೋಕಾರ್ಪಣೆ ಗೊಂಡವು.
ಇದರಲ್ಲಿ ಶಿವಾನಂದ ಎನ್ ಬಂಡೇಹಳ್ಳಿ ಇವರ ‘ಕಡೆದಷ್ಟು ಕನಸುಗಳು‘ ಎಂಬ ಕವನ ಸಂಕಲನವು ಬಿಡುಗಡೆ ಗೊಂಡ ನಲವತ್ತು ಕೃತಿಗಳಲ್ಲಿ ಅತ್ಯುತ್ತಮ ಪ್ರಶಸ್ತಿಗಳಿಸಿ ಸಾಹಿತಿಗಳ ಮನ್ನಣೆ ಪಡೆಯಿತು.
ಕಾರ್ಯಕ್ರಮದಲ್ಲಿ ಅಕ್ಷರ ನಾದ ಪಬ್ಲಿಕೇಷನ್ಸ್ ನ ರಾಜ್ಯಧ್ಯಕ್ಷೆ ಶ್ರುತಿ ಮಧುಸುಧಾನ್, ತಾರಾ, ತೇಜು ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷೆ ಗೌರಮ್ಮ ಉಪಸ್ಥಿತರಿದ್ದರು.

