ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ನಮ್ಮ ಕೆಎಸ್ಆರ್ ಟಿಸಿಯ ನೂತನ ‘ಫ್ಲೈಬಸ್‘ ಸೇವೆಗೆ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ, ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ‘ನಂದಿನಿ‘ ಉತ್ಪನ್ನಗಳ ಸ್ನ್ಯಾಕ್ಸ್ ಕಿಟ್ ವಿತರಿಸುವ ಉಪಕ್ರಮವನ್ನೂ ಸಚಿವರು ಉದ್ಘಾಟಿಸಿ ವಿತರಿಸಿದರು.
ಸಾರಿಗೆ ಸಚಿವನಾಗಿದ್ದ ನನ್ನ ಮೊದಲ ಅವಧಿಯ 2013ರಲ್ಲಿ ಮೈಸೂರಿಗೆ ಮೊದಲ ಫ್ಲೈಬಸ್ ಸೇವೆ ಆರಂಭಿಸಿದ್ದೆವು. ಆ ಬಳಿಕ ಮಡಿಕೇರಿ, ಕುಂದಾಪುರಕ್ಕೆ ವಿಸ್ತರಿಸಿ, ಇದೀಗ ದಾವಣಗೆರೆಗೂ ಈ ಜನಸ್ನೇಹಿ ಸೇವೆ ತಲುಪಿರುವುದು ಸಂತಸ ತಂದಿದೆ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನವೆಂಬರ್ 15, 2025 ರಿಂದ, KMF ಸಹಯೋಗದೊಂದಿಗೆ ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ಉಚಿತವಾಗಿ ನಂದಿನಿ ಸ್ನ್ಯಾಕ್ಸ್ ಕಿಟ್ (ನೀರಿನ ಬಾಟಲಿ, ಫ್ಲೇವರ್ಡ್ ಮಿಲ್ಕ್, ಕುಕೀಸ್, ಕೇಕ್, ಕೋಡುಬಳೆ) ವಿತರಿಸಲಾಗುವುದು.

ಈ ಕಾರ್ಯಕ್ರಮದಲ್ಲಿ KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕಿ ಡಾ. ಕೆ. ನಂದಿನಿ ದೇವಿ, ಇಬ್ರಾಹಿಂ ಮೈಗೂರ, KIALನ ಮುಖ್ಯ ವಾಣಿಜ್ಯ ಅಧಿಕಾರಿ ಕೆನೆತ್, ಉಪಾಧ್ಯಕ್ಷ (ವಾಣಿಜ್ಯ) ಪ್ರವತ್, ವ್ಯವಸ್ಥಾಪಕ (ವಾಣಿಜ್ಯ) ಸಂಜಯ್ ಚಂದ್ರ, KMFನ ಸ್ವಾತಿ ರೆಡ್ಡಿ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

