ಶೇಂಗಾ ಹಾಗೂ ತೊಗರಿ ಬೆಳೆಗಾರರಿಗೆ ಪರಿಹಾರ ನೀಡಲಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಮಳೆಯಾಶ್ರಿತ ಶೇಂಗಾ ಮತ್ತು ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರವನ್ನು ಬೆಳೆವಿಮೆ ಮೂಲಕ ನೀಡುವಂತೆ ಒತ್ತಾಯಿಸಿ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘ ತಹಶೀಲ್ಧಾರ್, ಇಒ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮನವಿ ನೀಡಿ ಒತ್ತಾಯಿಸಿ ಸಂಘದ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಶಿವಲಿಂಗಪ್ಪ ತಿಳಿಸಿದ್ದಾರೆ.

ಪ್ರಾರಂಭದಲ್ಲಿ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ಧಾರ್ ರೇಹಾನ್‌ಪಾಷ್‌ಗೆ ಮನವಿ ನೀಡಿ, ಪ್ರಸ್ತುತ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಮಳೆಯಾಶ್ರಿತ ಶೇಂಗಾ ಮತ್ತು ತೊಗರಿಬೆಳೆಗಾರರ ಸಂಘದಿಂದ ಮನವಿ ನೀಡಿ ಪ್ರಸ್ತುತ ವರ್ಷದಲ್ಲಿ ತಾಲ್ಲೂಕಿನಾದ್ಯಂತ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಇದ್ದು ಸಂಪೂರ್ಣವಾಗಿ ಒಣಗಿ ನಷ್ಟವಾಗಿದೆ. ತೊಗರಿಬೆಳೆಗಾರರು ಸಹ ಸರ್ಕಾರಕ್ಕೆ ಬೆಳೆವಿಮೆ ಪಾವತಿಸಿದ್ಧಾರೆ.

- Advertisement - 

ಇತ್ತೀಚಿನ ದಿನಗಳಲ್ಲಿ ತೊಗರಿ ಬೆಳೆಗಾರರಿಗೆ ಬೆಳೆನಷ್ಟ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ತಿಳಿಸಲಾಗಿದೆ. ಆದರೆ, ಈ ಹಿಂದೆಯೇ ಪ್ರತಿಭಟನೆ ನಡೆಸಿ ಮನವಿ ನೀಡಿದ ಸಂದರ್ಭದಲ್ಲಿ ಶೇ.೨೫ರಷ್ಟು ಮಧ್ಯಂತರ ಬೆಳೆವಿಮೆ ಪರಿಹಾರವನ್ನು ನೀಡಲು ಅಧಿಕಾರಿ ವರ್ಗ ತಿಳಿಸಿತ್ತು. ಅಧಿಕಾರಿಗಳು ವರದಿಯನ್ನು ಸರ್ಕಾರಕ್ಕೆ ಕಳಿಸಿರುವುದಾಗಿ ತಿಳಿಸಿದ್ಧಾರೆ.

ಸರ್ಕಾರ ತೊಗರಿಬೆಳೆಗಾರರ ಹಿತವನ್ನು ಕಾಪಾಡುವಲ್ಲಿ ಉತ್ತಮ ನಿರ್ಧಾರವನ್ನು ಕೈಗೊಂಡು ಮಧ್ಯಂತರ ಬೆಳೆ ಪರಿಹಾರವನ್ನು ಕೂಡಲೇ ನೀಡುವಂತೆ ಒತ್ತಾಯಿಸಿದರು. ಸರ್ಕಾರ ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ಧಾರೆ.

- Advertisement - 

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್, ಮಳೆಯಾಶ್ರಿತ ಶೇಂಗಾ, ತೊಗರಿ ಬೆಳೆಗಾರರ ಸಂಕಷ್ಟದ ಬಗ್ಗೆ ಈಗಾಗಲೇ ಜಿಲ್ಲಾಡಳಿತಕ್ಕೆ ವರದಿಯನ್ನು ನೀಡಲಾಗಿದೆ. ಶೇ.೨೫ರಷ್ಟು ಮಧ್ಯಂತರ ಪರಿಹಾರ ನೀಡುವಂತೆ ಅರ್ಜಿಸಲ್ಲಿಸಿದ್ದು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮನವಿಯನ್ನು ಕಳಿಸಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ :
ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘ ಪದಾಧಿಕಾರಿಗಳು ಸಹಾಯಕ ಕೃಷಿ ನಿರ್ದೇಶಕ ಕಚೇರಿಯಲ್ಲಿದ್ದ ಕೃಷಿ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥಗೆ ಮನವಿ ನೀಡಿ ಮಧ್ಯಂತರ ಪರಿಹಾರ ಕೊಡಿಸುವಂತೆ ಮನವಿ ಸಲ್ಲಿಸಿದರು.

ಮನವಿಸ್ವೀಕರಿಸಿದ ಅವರು ತಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳಿಸಿಕೊಡಲಾಗುವುದು. ಈಗಾಗಲೇ ಮಧ್ಯಂತರ ಪರಿಹಾರ ನೀಡುವ ಕುರಿತು ಇಲಾಖೆಯಿಂದ ಸರ್ಕಾರಕ್ಕೆ ಮಾಹಿತಿನೀಡಲಾಗಿದೆ ಎಂದರು.  ಕಾರ್ಯದರ್ಶಿ ಎಸ್. ಎಸ್.ಪ್ರಕಾಶ್, ನಿದೇಶಕ ಸಿದ್ದೇಶ್ವರರೆಡ್ಡಿ, ಆರ್.ಎ.ದಯಾನಂದಮೂರ್ತಿ ಮುಂತಾದವರು ಮನವಿ ಸಲ್ಲಿಸಿದರು. 

 

 

 

Share This Article
error: Content is protected !!
";